ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ತೀರ್ಥ ಮತ್ತೂರು ಗ್ರಾಮದ ಬಳಿ ತುಂಗಾ ನದಿಯಲ್ಲಿ ಈಜಲು ಹೋಗಿ ಇಬ್ಬರು ಪ್ರಾದ್ಯಾಪಕರು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಕಾರ್ಕಳದ ನಿಟ್ಟೆ ಕಾಲೇಜಿನ ಉಪನ್ಯಾಸಕರಾದ ಪುನೀತ್ (38) ಮತ್ತು ಬಾಲಾಜಿ (36) ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಇಬ್ಬರು ನಾಪತ್ತೆಯಾಗಿದ್ದು. ರಕ್ಷಣಾ ಕಾರ್ಯಾಚರಣೆ ವೇಳೆ ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
8-10 ಜನ ನಿಟ್ಟೆ ಕಾಲೇಜಿನ ಪ್ರಾಧ್ಯಾಪಕರು ತೀರ್ಥಮತ್ತೂರಿನ ಯೋಗ ನರಸಿಂಹ ಮಠಕ್ಜೆ ಆಗಮಿಸಿದ್ದರು. ಅಷ್ಟು ಜನ ನದಿಗೆ ಸ್ನಾನಕ್ಕೆ ಇಳಿದಿದ್ದಾರೆ. ಇಬ್ವರು ನೀರು ಪಾಲಾಗಿದ್ದಾರೆ. ಓರ್ವನ ಮೃತ ದೇಹ ಪತ್ತೆಯಾಗಿದ್ದು ಮತ್ತೋರ್ವರ ಶೋಧ ಕಾರ್ಯ ಮುಂದು ವರೆದಿದೆ. ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸುತ್ತಿದೆ. ಪುನೀತ್ (36) ಮತ್ತು ಬಾಲಾಜಿ ಬ ಇಬ್ಬರು ಪ್ರಾಧಗಯಪಕರು ನೀರು ಪಾಲಾಗಿದ್ದಾರೆ. ಸ್ವಲ್ಪ ಹೊತ್ತಿನ ಹಿಂದೆ ಓರ್ವರ ಮೃತ ದೇಹ ಪತ್ತೆಯಾಗಿದ್ದು ಅವರ ಗುರುತು ಪತ್ತೆಯಾಗಬೇಕಿದೆ.