ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಿಎಂ ಸಿದ್ದರಾಮಯ್ಯ ಸರ್ಕಾರ ಭಾರೀ ಸರ್ಕಸ್ ಮಾಡುತ್ತಿದೆ. ಕೆಲವು ಗ್ಯಾರಂಟಿಗ ಜಾರಿ ನಾಳೆ, ನಾಡಿದ್ದು ಎನ್ನುತ್ತ ಮುಂದೂಡುತ್ತಲೇ ಇದ್ದಾರೆ. ಶಕ್ತಿ ಯೋಜನೆಯನ್ನು ಸರಾಗವಾಗಿ ಜಾರಿ ಮಾಡಿದ ಕಾಂಗ್ರೆಸ್ ಸರ್ಕಾರ ಇದೀಗ ಗೃಹಜ್ಯೋತಿ ಅನುಷ್ಠಾನಕ್ಕೆ ಸಿದ್ದತೆ ನಡೆಸಿದೆ.ಜುಲೈ ನಿಂದ ಜಾರಿ ಬರುತ್ತಿರೋ ಗೃಹಜ್ಯೋತಿಗೆ ನಿನ್ನೆಯಿಂದ ಅರ್ಜಿ ನೋಂದಾಣಿಗೆ ಅವಕಾಶ ಮಾಡಿಕೊಟ್ಟಿದ್ದು,ಮೊದಲ ದಿನವೇ ಸರ್ವರ್ ದೋಷ ಕಂಡು ಬಂದಿದೆ.
ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಒಂದೊಂದೆ ಗ್ಯಾರಂಟಿಗಳನ್ನ ಆಮೆಗತಿಯಲ್ಲಿ ಜಾರಿ ಮಾಡ್ತಿದೆ. ಈಗಾಗಲೇ ಶಕ್ತಿ ಯೋಜನೆಯನ್ನ ಜಾರಿ ಮಾಡಿದ ಬೆನ್ನಲ್ಲೇ ಇದೀಗ ಗೃಹಜ್ಯೋತಿ ಜಾರಿಗೆ ಮುಂದಾಗಿದೆ. ಈಗಾಗಲೇ ಈ ಯೋಜನೆಗೆ ಆಡಳಿತ್ಮಕ ಅನುಮೋದನೆ ನೀಡಿದ್ದು, ಜುಲೈನಿಂದ ಫ್ರೀ ವಿದ್ಯುತ್ ನೀಡಲು ತಯಾರಿ ಮಾಡಿಕೊಳ್ಳಲಾಗ್ತಿದೆ. ಯೋಜನೆ ಫಲಾನುಭವಿಯಾಗಲು ಇಂದಿನಿಂದ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯೂನಿಟ್ ಉಚಿತವಾಗಿ ವಿದ್ಯುತ್ ನೀಡುವ ಗೃಹಜ್ಯೋತಿಗೆ ಮೊದಲ ದಿನವೇ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ರು.
ಇನ್ನೂ ಇವತ್ತು ಪೋರ್ಟನ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ವೆಬ್ ಸೈಟ್ ಕ್ಲೋಸ್ ಆಯ್ತು. .ಅರ್ಜಿ ಸಲ್ಲಿಕೆಯ ಆರಂಭದಲ್ಲಿ ಸರ್ವರ್ ಬ್ಯುಸಿ ಎಂದು ಕಾಣಿಸಿಕೊಂಡಿತ್ತು… ಬೆಂಗಳೂರು ಒನ್, ಬೆಸ್ಕಾಂ ಆಫೀಸ್ ಗಳಲ್ಲಿ ಸರ್ವಾರ್ ಡೌನ್ ಆಗಿ ಅರ್ಜಿ ಹಾಕಲು ಬಂದವರು ಕಾದು ಕಾದು ಸುಸ್ತು ಆದರು. ಗೃಹಜ್ಯೋತಿ’ಯೋಜನೆಯಡಿ ಫಲಾನುಭವಿಯಾಗಲು ಗ್ರಾಹಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಸೇವಾ ಸಿಂಧು ರ್ಪೋಟಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಈ ವೆಬ್ಸೈಟ್ ಮೊಬೈಲ್ ಫೋನ್,ಲ್ಯಾಪ್ ಟ್ಯಾಪ್ಗಳಲ್ಲಿಯೂ ಕಾರ್ಯ ನಿರ್ವಹಣೆ ಮಾಡಲಿದೆ.ಸರ್ವಾರ್ ಡೌನ್ ಆಗೋ ಪ್ರಶ್ನೆ ಇಲ್ಲ ಅಂತ ಬೆಸ್ಕಾಂ ಅಧಿಕಾರಿಗಳು ತಿಳಿಸಿದರು
ಯೋಜನೆಗಾಗಿ ಗ್ರಾಹಕರು ಅರ್ಜಿಗಳನ್ನು ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಛೇರಿಗಳಲ್ಲಿಯೂ ಸಹ ಸಲ್ಲಿಕೆ ಮಾಡಬಹುದು. ನಿಮ್ಮ ಹತ್ತಿರದ ವಿದ್ಯುತ್ ಕಚೇರಿಯಲ್ಲಿ ಇದಕ್ಕಾಗಿಯೇ ವಿಶೇಷ ಡೆಸ್ಕ್ ಸ್ಥಾಪನೆ ಮಾಡಲಾಗಿದೆ. ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ವಿದ್ಯುಚ್ಛಕ್ತಿ ಕಛೇರಿ ಅಥವಾ 24×7 ಸಹಾಯವಾಣಿ 1912ಗೆ ಕರೆ ಮಾಡಬಹುದು.ಉಚಿತ ವಿದ್ಯುತ್ ಪಡೆಯಲು ಫಲಾನುಭವಿಗಳು ಆಧಾರ್ ಕಾರ್ಡ್, ಗ್ರಾಹಕರ ID ಗಳ ಮಾಹಿತಿಗಳನ್ನುನೋಂದಣಿ ಸಮಯದಲ್ಲಿ ನೀಡಬೇಕಾಗುತ್ತದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ಇರುವ ಜನರು ಬಾಡಿಗೆ ಕರಾರು ಪತ್ರವನ್ನು ಅಪ್ಲೋಡ್ ಮಾಡಬೇಕಿದೆ.. ಯೋಜನೆ ಜುಲೈ ತಿಂಗಳ ವಿದ್ಯುಚ್ಛಕ್ತಿ ಬಳಕೆ ರಿಂದ ಜಾರಿಗೆ ಬರಲಿದ್ದು ಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ.
ಗೃಹಜ್ಯೋತಿ’ ಯೋಜನೆ ಷರತ್ತುಗಳು
– ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ.
-ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಗೃಹಜ್ಯೋತಿ ಗೆ ಅನ್ವಯವಿಲ್ಲ.-
– ಪ್ರತಿ ತಿಂಗಳು ಮೀಟರ್ ರೀಡಿಂಗ್ ಮಾಡಿದಾಗ ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ ಅನ್ನು ನಮೂದಿಸುವುದು.
-ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ net bill ನೀಡುವುದು ಹಾಗೂ ಗ್ರಾಹಕರು net bill ಪಾವತಿಸುವುದು.
-ಅರ್ಹ ಯೂನಿಟ್ ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್..
ಒಟ್ಟಾರೆ, ಗ್ಯಾರಂಟಿಗಳನ್ನ ಘೋಷಣೆ ಮಾಡಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಸರ್ಕಾರ ಹೆಣಗಾಡುತ್ತಿದೆ. ಇದ್ರ ಮಧ್ಯೆ ಕೆಲವು ತಾಂತ್ರಿಕ ಸಮಸ್ಯೆಗಳು, ಸಿಬ್ಬಂದಿ ಕೊರತೆ, ಹೊಂದಾಣಿಕೆ ಸಮಸ್ಯೆಯಿಂದ ಗ್ಯಾರಂಟಿ ಜಾರಿ ವಿಳಂಬವಾಗ್ತಿದೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಶಕ್ತಿ ಯೋಜನೆ ಬಳಿಕ ಗೃಹಜ್ಯೋತಿ ಮನೆ ಸೇರ್ತಾಳೆ ಅಂತಾ ಜನ ಕಾದು ಕೂತಿರೋದಂತೂ ಸತ್ಯ.