ಬೆಂಗಳೂರು: ಅದು ಮಧ್ಯರಾತ್ರಿ ಸಮಯ ಇಲ್ಲೊಬ್ಬ ಕ್ಯಾಬ್ ಬುಕ್ ಮಾಡ್ಕೊಂಡು ಓಡಾಡ್ತಿದ್ದ, ಅದೇನೋ ಚಾಳಿಯೋ ಈತನಿಗೆ ಗೊತ್ತಿಲ್ಲ ಉತ್ತರ ಕರ್ನಾಟಕ ಭಾಗದ ಡ್ರೈವರ್ ಗಳನ್ನೆ ಟಾರ್ಗೆಟ್ ಮಾಡ್ತಿದ್ದ, ದರೋಡೆ ಮಾಡಿ ಅವರಿಂದ ಹಣ ಪೀಕಲು ಶುರು ಮಾಡ್ತಿದ್ದ, ಅಷ್ಟಕ್ಕೂ ಆ ಭಾಗದ ಕ್ಯಾಬ್ ಡ್ರೈವರ್ ಗಳನ್ನ ಬುಕ್ ಮಾಡ್ತಿದ್ದಕ್ಕೆ ಕಾರಣ ಕೇಳಿದ್ರೆ ಎಂತಹವರು ಕೂಡ ಬೆಚ್ಚಿ ಬೀಳ್ತಾರೆ ಅದರ ಅಸಲಿ ಗುಟ್ಟು ಬಿಚ್ವಿಡ್ತೀವಿ. ನೋಡಿ ಅಬ್ಬಾಬ್ಬಾ ಎಂತಾ ಕಿಲಾಡಿ ಮನುಷ್ಯ ನೋಡಿ, ಒಲಾ ಹಾಗೂ ಉಬರ್ ಕಂಪನಿಗಳಲ್ಲಿ ಕೆಲಸ ಮಾಡೋರು ಕಡು ಬಡವರು,
ಪ್ರತಿದಿನ ಸಿಗೋ ಹಣಕ್ಕಾಗಿ ಎಲ್ಲೆಂದರಲ್ಲಿಗೆ ರಾತ್ರಿ ಲೇಟಾದ್ರೂ ಕೂಡ ಮನೆಗೆ ತಲುಪಿಸೋ ಜವಬ್ದಾರಿ ಆ ಚಾಲಕನದ್ದೆ ಆಗಿರುತ್ತೆ,. ಅಂತಹ ಕೆಲಸ ಮಾಡೋರನ್ನ ಬಿಡದ ಈ ಸುಲಿಗೆಕೋರರು ಇವರನ್ನ ಬಿಡ್ತಾಯಿಲ್ಲ ನೋಡಿ, ರಾತ್ರೋ ರಾತ್ರಿ ಖಾಸಗಿ ಕ್ಯಾಬ್ ಅನ್ನು ಬುಕ್ ಮಾಡೋದು ದೂರದ ಜನನಿಬಿಡ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸುಲಿಗೆ ಮಾಡೋದನ್ನೆ ಖಯಾಲಿ ಮಾಡಿಕೊಂಡಿದ್ರು , ರಾತ್ರೋ ರಾತ್ರಿ ಡ್ರ್ಯಾಗರ್ ತೋರಿಸಿ ಬೆದರಿಸಿ ಹಣ ಪೀಕುತ್ತಿದ್ದ ಈತನನ್ನು ಬಾಸಣವಾಡಿ ಪೊಲೀಸ್ರು ಬಂಧನ ಮಾಡಿದ್ದಾರೆ, ಬಂಧನವಾದ ನಂತ್ರ ವಿಚಾರಣೆಯಲ್ಲಿ ಬಾಯ್ಬಿಟ್ಟ ಸತ್ಯ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ..
ಇನ್ನೂ ಈ ಅಸಾಮಿ ಇದೇ ಕ್ಯಾಬ್ ಬುಕ್ ಮಾಡಿ ಆತ ಉತ್ತರ ಕರ್ನಾಟಕ ಭಾಗದ ಡ್ರೈವರ್ ಅಲ್ಲ ಎಂದು ಗೊತ್ತಾದ ನಂತ್ರ ಬುಕ್ಕಿಂಗ್ ಕ್ಯಾನ್ಸಲ್ ಕೂಡ ಮಾಡ್ತಿದ್ದ, ಹೀಗೆ ಬುಕ್ ಮಾಡಿ ಕ್ಯಾನ್ಸಲ್ ಮಾಡ್ತಿದ್ದನ್ನ ಗಮನಿಸಿದ ಕಂಪನಿ ಈತನ ನಂಬರ್ ಅನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿತ್ತು, ಅದ್ರೂ ಆತನ ಸ್ನೇಹಿತನ ನಂಬರ್ ನಿಂದ ಬುಕ್ ಮಾಡಿ ಈ ಕೃತ್ಯ ಎಸಗುತ್ತಿದ್ದ, ವಿಚಾರಣೆ ವೇಳೆ ಉತ್ತರ ಕರ್ನಾಟಕ ಭಾಗದವರನ್ನೆ ಯಾಕೆ ಟಾರ್ಗೆಟ್ ಮಾಡ್ತೀಯಾ ಅನ್ನೋ ಪ್ರಶ್ನೆಗೆ, ಉತ್ತರ ಕರ್ನಾಟಕ ಭಾಗದ ಜನರು ಪೊಲೀಸ್ ಕಂಪ್ಲೇಟ್ ಕೋಡೋಎಲಗೆ ಹಿಂಜರಿಯುತ್ತಾರೆ ಅದಕ್ಕಾಗಿ ನಾನು ಆ ಭಾಗದ ಡ್ರೈವರ್ ಗಳನ್ನೆ ಟಾರ್ಗೆಟ್ ಮಾಡ್ತಿದ್ದೆ ಸರ್ ಎಂದಿದ್ದ,
ನಿರ್ಜನ ಪ್ರದೇಶಕ್ಕೆ ಕರೆದೊಯ್ಯತ್ತಿದ್ದ ಆರೋಪಿ ವಿನಯ್ ಹಣವಿಲ್ಲ ಎಂಬುದು ಗೊತ್ತಾದ ಬಳಿಕ ಆತನ ಸಂಬಂಧಿಕರಿಗೆ ಕರೆ ಮಾಡಿ ನಿಮ್ಮವರಿಗೆ ಆ್ಯಕ್ಸಿಡೆಂಟ್ ಆಗಿದೆ ಕೂಡಲೇ ಆಸ್ಪತ್ರೆಗೆ ಸೇರಿಸಬೇಕು ಎಂಬುದಾಗಿ ಪೋನ್ ಪೇ ಮುಖಾಂತರ ಹಣ ಹಾಕಿಸಿಕೊಳ್ಳುತ್ತಿದ್ದ, ಇಷ್ಟೆಲ್ಲಾ ಪ್ಲ್ಯಾನ್ ಮಾಡಿ ಸುಲಿಗೆ ಮಾಡ್ತಾಯಿದ್ದವರು ಅಂದರ್ ಆಗಿದ್ದಾನೆ, ಈತನ ಮೇಲೆ ಸುಮಾರು ನಾಲ್ಕು ಸುಲಿಗೆ ಪ್ರಕರಣಗಳಿದ್ದು ಮುಂದಿನ ತನಿಖೆ ಮಾಡ್ತಾಯಿದ್ದೇವೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ರು, ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸಲಹೆ ಸೂಚನೆ ನೀಡಿದ್ರು.. ಒಟ್ಟಾರೆಯಾಗಿ ಕ್ಯಾಬ್ ಚಾಲಕರನ್ನ ಬಿಡದ ಇಂತಹ ಕ್ರಿಮಿ ಗಳಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ, ಇನ್ನೂ ಇಂತಹವರ ಬಗ್ಗೆ ಕೊಂಚ ಕೂಡ ಅನುಮಾನ ಬಂದ್ರು ಪಕ್ಕದ ಪೊಲೀಸ್ ಠಾಣೆ ಹಾಗೂ 112 ಪೊಲೀಸ್ ಸಹಾಯವಾಣಿ ಬಳಸಬಹುದಾಗಿದೆ..