ಸುಡಾನ್ ;- 72 ಗಂಟೆಗಳ ಯುದ್ಧವಿರಾಮ ಜಾರಿಗೆ ಸುಡಾನ್ನ ಸೇನೆ ಹಾಗೂ ಅರೆಸೇನಾ ಪಡೆ ಸಮ್ಮತಿಸಿದೆ.
ಸುಡಾನ್ನಲ್ಲಿ ಎಪ್ರಿಲ್ 15ರಿಂದ ಸೇನೆ ಮತ್ತು ಅರೆಸೇನಾ ಪಡೆ ನಡುವೆ ಸಂಘರ್ಷ ನಡೆಯುತ್ತಿದೆ. ಹಲವು ಬಾರಿ ಕದನ ವಿರಾಮ ಜಾರಿಗೆ ಅಮೆರಿಕ-ಸೌದಿ ಅರೆಬಿಯಾದ ಮಧ್ಯಸ್ಥಿಕೆಯಲ್ಲಿ ಬಂದಿದ್ದರೂ ಕೆಲವೇ ದಿನಗಳಲ್ಲಿ ಅದು ವಿಫಲವಾಗಿತ್ತು.
ಇದೀಗ ರವಿವಾರ ಬೆಳಿಗ್ಗೆ 6 ಗಂಟೆ ಯಿಂದ ಮುಂದಿನ 72 ಗಂಟೆಗಳ ಅವಧಿಯಲ್ಲಿ ಮತ್ತೆ ಕದನ ವಿರಾಮ ಜಾರಿಗೆ ಉಭಯ ಪಡೆಗಳೂ ಸಮ್ಮತಿಸಿವೆ ಎಂದು ತಿಳಿದು ಬಂದಿದೆ.