ಮುಂಬೈ: ಮತದಾರರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಕರ್ನಾಟಕದ ಜನರು ಬಾಹುಬಲಿಗೆ ಬಗ್ಗಲಿಲ್ಲ ಮತ್ತು ಅಂಜಲಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ (Uddhav Thackeray) ಕಿಡಿಕಾರಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಶಿಬಿರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸೋತಿರುವುದಕ್ಕೆ ಕರ್ನಾಟಕದ ಜನತೆಗೆ ವಿಶೇಷ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ.
ಮಹಾ ಶಕ್ತಿಯ ಜಂಬ ಎಂಬ ಬಲೂನ್ನನ್ನು ಒಡೆದು ಹಾಕಿದ್ದೀರಿ ಎಂದು ಕರ್ನಾಟಕದ ಮತದಾರರನ್ನು ಹಾಡಿ ಹೊಗಳಿದ್ದಾರೆ. ಬಜರಂಗಬಲಿಗೆ ವಂದಿಸುತ್ತೇನೆ, ಗದೆ ಅವರ ತಲೆಯ ಮೇಲೆ ಹಾಕಿದ್ದೀರಿ. ಬಜರಂಗಬಲಿ ಗದೆ ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಬಿದ್ದಿದೆ. ಅದೇ ಶಕ್ತಿ ನಮ್ಮ ಮಹಾರಾಷ್ಟ್ರದ ಜನತೆಗೆ ಬರಬೇಕೆಂದು ಬಜರಂಗಬಲಿ ಬಳಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.