ಬೆಂಗಳೂರು ;- ಸೇಫ್ ಸಿಟಿಯತ್ತ ರಾಜಧಾನಿ ಬೆಂಗಳೂರು ಬದಲಾಗುತ್ತಿದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ತುರ್ತು ಸಹಾಯವಾಣಿ ಸೇವೆ ಆರಂಭವಾಗಿವೆ. ನಗರದಲ್ಲಿ ಪೊಲೀಸರಿಂದ ತುರ್ತು ಸಹಾಯ ನಿರ್ಮಾಣ ಮಾಡಿದ್ದು, ತುರ್ತು ಸಹಾಯವಾಣಿ ಉಪಯೋಗದಿಂದ ಮಹಿಳೆಯರು ನಿಂತ ಸ್ಥಳದಿಂದಲೇ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ.
ನೀವು ಮಾಡಬೇಕಾದದ್ದು ಇಷ್ಟೇ, ಒಂದು ಬಟನ್ ಪ್ರೆಸ್ ಮಾಡಿದರೆ ಸಾಕು ನಿಮ್ಮ ಸುತ್ತಮುತ್ತ ವಿಡಿಯೋ ಸಮೇತ ರೆಕಾರ್ಡ್ ಆಗತ್ತೆ. ನೇರವಾಗಿ ಕಮಾಂಡ್ ಸೆಂಟರ್ಗೆ ಕರೆ ಹೋಗುವ ಮೂಲಕ ಮಾಹಿತಿ ಕಲೆ ಹಾಕಲಾಗುತ್ತದೆ. ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ.