ಬೆಂಗಳೂರು ;- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಅಮಿತ್ ಮಾಳವೀಯ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿದ ಹಿನ್ನೆಲೆ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಜೂನ್ 17ರಂದು ಆಯನಿಮೇಟೆಡ್ ವೀಡಿಯೋದಲ್ಲಿ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಉಲ್ಲೇಖಿಸಿ ರಾಹುಲ್ ಗಾಂಧಿ ವಿರುದ್ಧ ವೀಡಿಯೋ ಹರಿಬಿಟ್ಟ ಹಿನ್ನೆಲೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಳಿಕ ಮಾತನಾಡಿದ ಸಚಿವರು, ಬಡವರ ಏಳಿಗೆಗಾಗಿ ಕೆಲಸ ಮಾಡ್ತಿರೋದು ಬಿಜೆಪಿಗರಿಗೆ ಇಷ್ಟ ಆಗುತ್ತಿಲ್ಲ. ಅದಕ್ಕೆ ಈ ರೀತಿ ಸುಳ್ಳು ಆರೋಪಿಸಿ ಪೋಸ್ಟ್ ಮಾಡ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ಕೊಟ್ಟಿದ್ದೇವೆ. ಅವರು ತಾಕತ್ ಇದ್ದರೆ ಕರ್ನಾಟಕಕ್ಕೆ ಬಂದು ಹೇಳಲಿ. ನಾವು ಹೇಗೆ ಆಯಂಟಿ ಇಂಡಿಯಾ ಆಕ್ಟಿವಿಟಿ ಮಾಡ್ತಿದ್ದೀವಿ ಅಂತಾ ಹೇಳಲಿ” ಎಂದು ಸವಾಲು ಹಾಕಿದರು.