ಬೆಂಗಳೂರು ; ಭಾವಾಸಾರ ಕೊ ಅಪರೇಟೀವ್ ಬ್ಯಾಂಕಿನಿಂದ ಸಾಲ ಪಡೆದು ಮನೆ ಓನರ್ ತಲೆಮರೆಸಿಕೊಂಡಿದ್ದ ಹಿನ್ನೆಲೆ ಪೋಲಿಸರ ಸಮ್ಮುಖದಲ್ಲಿ ಬ್ಯಾಂಕ್ ಅಧಿಕಾರಿಗಳು ಲೀಜ್ ಗೆ ವಾಸವಿದ್ದ ಆರು ಕುಟುಂಬಗಳನ್ನು ಖಾಲಿ ಮಾಡಿಸಿದ್ದಾರೆ. ಆರು ಮನೆಗಳಲ್ಲಿ ಆರು ಕುಟುಂಬಗಳು ಲೀಜ್ ಗೆ ವಾಸವಿದ್ದರು. ಆದರೆ ಇದ್ದಕ್ಕಿದ್ದಂತೆ ಏಕಾಏಕಿ ಮನೆಯಲ್ಲಿದ್ದವರನ್ನ ಅಧಿಕಾರಿಗಳು ಖಾಲಿ ಮಾಡಿಸುತ್ತಿದ್ದಾರೆ.
ಮನೆಯಲ್ಲಿ ವಯಸ್ಸಾದವರು ಇದ್ದರೂ ಸಹ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದ್ದು, ಮನೆ ಓನರ್ ರತ್ನಮ್ಮ ಎಸ್ಕೇಪ್ ಆಗಿರುವ ಹಿನ್ನೆಲೆ ಆರು ಕುಟುಂಬಗಳು ಬೀದಿಗೆ ಬಂದಿದೆ. ಅಗ್ರಹಾರ ದಾಸರಹಳ್ಳಿಯ 13 ನೆ ಕ್ರಾಸ್ ನ ಬಳಿಯಿರುವ ಮನೆಗಳಿಗೆ ಬೀಗ ಹಾಕಿ ಸೀಲ್ ಮಾಡಿ ಅಧಿಕಾರಿಗಳು ಹೋಗಿದ್ದಾರೆ. ಇನ್ನೂ ಆರು ಮನೆಯವರು ಒಂದೊಂದು ಮನೆಗೂ 4 ಲಕ್ಷಕ್ಕೆ ಲೀಜ್ ಗೆ ಇದ್ದರು. ಆದರೆ ಇದೀಗ ಅವರ ಜೀವನ ಬೀದಿಗೆ ಬಂದಿದೆ.