ಬೆಳಗಾವಿ: ಕರ್ನಾಟಕದಲ್ಲಿ ಕೆಲವೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ಹವಾಮಾನ ಇಲಾಖೆ ವರದಿ ಪ್ರಕಾರ ಮುಂಗಾರು ಚುರುಕು ಆಗುತ್ತೆ ಎಂದು ಬೆಳಗಾವಿ ನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನಿಡಿದ್ದಾರೆ. ಮುಂದಿನ 7 ದಿನ ರಾಜ್ಯದಲ್ಲಿ ಮಳೆ ಆಗುತ್ತೆ ಅಂತಾ ವರದಿಯಲ್ಲಿದೆ.
ನೀರಿನ ಸಮಸ್ಯೆ ಬಗೆಹರಿಸಲು ಆಯಾ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತೆ. ಬೆಳಗಾವಿ ಜಿಲ್ಲೆಯ ರಕ್ಕಸಕೊಪ್ಪ ಜಲಾಶಯ ಸಹ ಖಾಲಿ ಆಗಿದೆ. ಜಲಾಶಯ ಮಟ್ಟ ಕುಸಿದಿದ್ರೂ ಟ್ಯಾಂಕರ್ಗಳಿಂದ ನೀರು ಪೂರೈಕೆ ಮಾಡಲಾಗುತ್ತೆ. ಮಳೆಯಾಗದಿದ್ರೆ ಸರ್ಕಾರ ಮೋಡ ಬಿತ್ತನೆಗೆ ಚಿಂತನೆ ಮಾಡುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.