ಗದಗ ;- ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕರೆದುಕೊಂಡು ಹೋಗೋವಾಗ ವಾಹನಕ್ಕೆ ಅಡ್ಡಗಟ್ಟಿ ಪೋಷಕರು ಹೈಡ್ರಾಮ ನಡೆಸಿರುವ ಘಟನೆ ಜರುಗಿದೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಘಟನೆ ಜರುಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕಾರ್ಯಾಚರಣೆ ವೇಳೆ ಈ ಘಟನೆ ಜರುಗಿದೆ. ಭಿಕ್ಷಾಟನೆ, ಬಾಲಕಾರ್ಮಿಕ ಮಕ್ಕಳ, ಶಾಲೆ ಬಿಟ್ಟ ಮಕ್ಕಳ, ಇತರೇ ಚಟುವಟಿಕೆಯಲ್ಲಿ ಮಕ್ಕಳು ಭಾಗಿಯಾಗಿದರು. ಈ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮುಂದಾದಾಗ ಈ ಘಟನೆ ಜರುಗಿದೆ.
ಈ ಮೂಲಕ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ ಮಕ್ಕಳ ರಕ್ಷಣೆ ಮಾಡಲಾಗಿದೆ. ಈ ಮಕ್ಕಳು ಣ್ಣ ಪುಟ್ಟ ಹೋಟೆಲ್ ಮತ್ತು ಅಂಗಡಿಗಳಲ್ಲಿ ಕೆಲಸ ಮತ್ತು ಭಿಕ್ಷಾಟನೆ ಮಾಡ್ತಿದ್ದರು ಎಂದು ತಿಳಿದು ಬಂದಿದೆ.