ಬೆಂಗಳೂರು ;- 15 IPS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾಲ್ಕು ದಿನಗಳ ಹಿಂದಷ್ಟೇ 10 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ 15 ಐಪಿಎಸ್ ಅಧಿಕಾರಿಗಳು ವರ್ಗಾವಣೆ ಮಾಡಿದೆ.
ಕೆ. ರಾಮಚಂದ್ರ ರಾವ್, ಮಾಲಿನಿ ಕೃಷ್ಣಮೂರ್ತಿ, ಅರುಣ್ ಚಕ್ರವರ್ತಿ ಜೆ., ಮನೀಷ್ ಕರ್ಬಿಕರ್, ಎಂ. ಚಂದ್ರಶೇಖರ್, ವಿಪುಲ್ ಕುಮಾರ್, ಪ್ರವೀಣ್ ಮಧುಕರ್ ಪವಾರ್, ಎನ್. ಸತೀಶ್ ಕುಮಾರ್, ಸಂದೀಪ್ ಪಾಟಿಲ್, ವಿಕಾಸ್ ಕುಮಾರ್ ವಿಕಾಸ್, ರಮಣ್ ಗುಪ್ತಾ, ಎಸ್.ಎನ್. ಸಿದ್ದರಾಮಪ್ಪ, ಎಂ.ಬಿ. ಬೋರಲಿಂಗಯ್ಯ, ಸಿ. ವಂಶಿಕೃಷ್ಣ ಹಾಗೂ ಸಿ.ಬಿ. ರಿಷ್ಯಂತ್ ಅವರನ್ನು ತಕ್ಷಣ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.