ವಾಷಿಂಗ್ಟನ್: ಜೂನ್ 22 ರಂದು ಅಮೆರಿಕಾದಲ್ಲಿ ಕಾಂಗ್ರೆಸ್ನ ಐತಿಹಾಸಿಕ ಜಂಟಿ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗ ಶ್ರೀ ಥಾನೇದಾರ್ ಅವರು ಕರೆದೊಯ್ಯಲಿದ್ದಾರೆ.
ಶ್ರೀ ಥಾನೇದಾರ್ ಮಿಚಿಗನ್ನ 13 ನೇ ಕಾಂಗ್ರೆಸನಲ್ ಡಿಸ್ಟ್ರಿಕ್ಟ್ ಅನ್ನು ಮೊದಲ ಬಾರಿಗೆ ಪ್ರತಿನಿಧಿಸುತ್ತಿದ್ದು, ಅವರನ್ನು ಅಧ್ಯಕ್ಷ ಜೋ ಬೈಡನ್ ಅವರು ಅದೇ ದಿನ ಪ್ರಧಾನಿ ಮೋದಿಯವರ ಗೌರವಾರ್ಥ ಆಯೋಜಿಸಿದ ವೈಟ್ ಹೌಸ್ ಸ್ಟೇಟ್ ಡಿನ್ನರ್ಗೆ ಆಹ್ವಾನಿಸಿದ್ದಾರೆ.
ಅಮೆರಿಕಾ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಎರಡು ಬಾರಿ ಮಾತನಾಡುವ ಮೊಟ್ಟ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಲಿದ್ದಾರೆ. ಪ್ರಧಾನಮಂತ್ರಿಯವರು ಈ ಹಿಂದೆ 2016 ರಲ್ಲಿ ಅಮೆರಿಕಾ ಕಾಂಗ್ರೆಸ್ನ್ನು ಉದ್ದೇಶಿಸಿ ಮಾತನಾಡಿದ್ದರು. ನನ್ನ ಪತ್ನಿ ಶಶಿ ಥಾನೇದಾರ್ ಮತ್ತು ನಾನು ಪ್ರಧಾನಿಯವರ ಅಮೆರಿಕಾ ಭೇಟಿಯನ್ನು ಎದುರು ನೋಡುತ್ತಿದ್ದೇವೆ; ಇದು ಪ್ರಧಾನಿಯವರಿಗೆ ಐತಿಹಾಸಿಕ ಘಟನೆಯಾಗಲಿದೆ. ಮಾನ್ಯ ಪ್ರಧಾನಿಯವರಿಗೆ ಅಮೆರಿಕಾ-ಭಾರತ ಸಂಬಂಧಗಳ ಅಗತ್ಯವನ್ನು ಒತ್ತಿ ಹೇಳಲು ಆಶಿಸುತ್ತೇನೆ ಎಂದು ಥಾನೇದಾರ್ ಹೇಳಿದ್ದಾರೆ.
ಜೂನ್ 22 ರಂದು ನಡೆಯುವ ರಾಜ್ಯ ಔತಣಕೂಟಕ್ಕೆ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಡಾ. ಜಿಲ್ ಬೈಡನ್ ಅವರ ಆಹ್ವಾನವನ್ನು ಸ್ವೀಕರಿಸಲು ನಾನು ಮತ್ತು ನನ್ನ ಪತ್ನಿ ಶಶಿ ಗೌರವಾನ್ವಿತರಾಗಿದ್ದೇವೆ ಎಂದು ಥಾನೇದರ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಆಹ್ವಾನವು ಸಾರ್ವಜನಿಕ ಸೇವೆಗೆ ಅವರ ಬದ್ಧತೆ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಬೆಳೆಸುವ ಅವರ ಸಮರ್ಪಣೆಗೆ ಸಾಕ್ಷಿಯಾಗಿದೆ.