ರಾಮ್ ಚರಣ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮದುವೆಯಾದ 11 ವರ್ಷಗಳ ಬಳಿಕ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಹೊಸ ಸದಸ್ಯೆಯ ಆಗಮನದಿಂದ ಮೆಗಾ ಕುಟುಂಬದಲ್ಲಿ ಖುಷಿ ಮತ್ತಷ್ಟು ಹೆಚ್ಚಿದೆ.
ಉಪಾಸನಾ ಅವರನ್ನು ಸೋಮವಾರ (ಜೂನ್ 19) ರಾತ್ರಿ ಹೈದರಾಬಾದ್ನ ಜುಬ್ಲಿ ಹಿಲ್ಸ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮುಂಜಾನೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ವಿಚಾರವನ್ನು ಆಸ್ಪತ್ರೆಯವರು ಖಚಿತಪಡಿಸಿದ್ದಾರೆ.
2012ರ ಜೂನ್ 14ರಂದು ರಾಮ್ ಚರಣ್ ಮತ್ತು ಉಪಾಸನಾ ಮದುವೆಯಾಗಿದ್ದು, ಮದುವೆಯಾದ ದಶಕಗಳ ಬಳಿಕ ಮೊದಲ ಮಗು ಪಡೆಯಲು ನಿರ್ಧರಿಸಿದ್ದರು. ಈಗ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಕಡೆಯಿಂದ ದಂಪತಿಗೆ ಶುಭಾಶಯ ಬರುತ್ತಿದೆ.