ಉತ್ತರಾಖಂಡ್: ಇಂದು ದೇಶಾದ್ಯಂತ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು ಉತ್ತರಾಖಂಡ್ನ ಹರಿದ್ವಾರದಲ್ಲಿ ಯೋಗ ಗುರು ಬಾಬಾ ರಾಮ್ದೇವ್ ನೇತೃತ್ವದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯುತ್ತಿದೆ. ಆದ್ರೆ ಯೋಗಗುರು ಬಾಬಾ ರಾಮ್ದೇವ್ ಅವರು ಒಂದು ದಿನ ಮೊದಲೇ ಯೋಗಾಸನದ ಅಭ್ಯಾಸ ಮಾಡಿದ್ದಾರೆ.
ನಿನ್ನೆ ಸಿಂಗಾಪುರದಲ್ಲಿ ಯೋಗಾಭ್ಯಾಸ ಮಾಡಿದ ಪತಂಜಲಿ ಸಂಸ್ಥಾಪಕ ಮತ್ತು ಯೋಗಗುರು ಬಾಬಾ ರಾಮ್ದೇವ್, ಯೋಗದ ವಿವಿಧ ಆಸನಗಳನ್ನ ಪ್ರದರ್ಶಿಸಿದ್ರು. ಜೂನ್ 21ರ ಯೋಗ ದಿನದಂದು ಯೋಗಗುರು ಬಾಬಾ ರಾಮ್ದೇವ್, ಉತ್ತರಾಖಂಡ್ನ ಹರಿದ್ವಾರದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಸಿದರು. ಯೋಗ ಕಾರ್ಯಕ್ರಮದಲ್ಲಿ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಭಾಗಿಯಾಗಿದ್ದಾರೆ.