ಬೆಂಗಳೂರು: ಶಕ್ತಿ ಯೋಜನೆ ಬಂದ ಮೇಲೆ ವೋಲ್ವೋ ಬಸ್ ಆದಾಯ ನಷ್ಟ ಆಗುತ್ತೆ ಎಂದೇ ಭಾವಿಸಲಾಗಿತ್ತು. ಆದರೆ BMTC Volvo Bus ಖಾಲಿ ಓಡಾಡ್ತಿಲ್ಲ.ಕಳೆದೊಂದು ವಾರದಿಂದ ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆ ಏರಿಕೆ ಆಗ್ತಿದೆ. ಮಹಿಳೆಯರು ದುಡ್ಡು ಕೊಟ್ಟೂ ಬಸ್ ಲ್ಲಿ ಪ್ರಯಾಣ ಮಾಡ್ತಿದಾರೆ
ಬಿಎಂಟಿಸಿ ಪಾಲಿಗೆ ವೋಲ್ವೋ ಬಸ್ ಬಿಳಿಯಾನೆ ಸಾಕಿದಂತೆ. ಆರಂಭದಲ್ಲೂ ಈ ಬಸ್ ಗಳು ಲಾಭಕ್ಕಿಂತ ನಷ್ಟ ಮಾಡಿದ್ದೆ ಹೆಚ್ಚು. ಆದ್ರೆ ಶಕ್ತಿ ಯೋಜನೆ ಜಾರಿಯಾದ್ಮೇಲೆ ವೋಲ್ವೋ ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಕೆಯ ಆತಂಕ ವ್ಯಕ್ತವಾಗಿತ್ತು. ಆದ್ರೆ ಬಿಎಂಟಿಸಿಗೆ ಬೊಕ್ಕಸ ತುಂಬಿಸುತ್ತಿರುವ ಶಕ್ತಿ ಯೋಜನೆ ಆಗುತ್ತಿದೆ. BMTC ಐಷಾರಾಮಿ ಬಸ್ ಗಳಿಗೆ ಶಕ್ತಿ ತುಂಬಿದ ಸರ್ಕಾರದ ‘ಶಕ್ತಿ’ ಸ್ಕೀಂ ಆಗುತ್ತಿದೆ. ಸರ್ಕಾರದ ಶಕ್ತಿ ಯೋಜನೆಯಿಂದ ವೋಲ್ವೋ ಬಸ್ಗಳಿಲ್ಲ ಎಫೆಕ್ಟ್ ಇಲ್ಲ. ಕಳೆದೊಂದು ವಾರದಲ್ಲಿ ವೋಲ್ವೋ, ವಜ್ರ ಬಸ್ ಗಳ ಪ್ರಯಾಣದಲ್ಲಿ ಗಣನೀಯ ಏರಿಕೆ ಆಗಿದೆ. ದಿನನಿತ್ಯ ನಿತ್ಯ 5 ರಿಂದ 6 ಸಾವಿರ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಿದೆ.
ನಗರದಲ್ಲಿ ನಿತ್ಯ ಬಿಎಂಟಿಸಿ 470 ವೋಲ್ವೋ ಬಸ್ ಗಳು ಓಡಾಡುತ್ತವೆ. ಆಡುಗೋಡಿ, ವೈಟ್ ಫೀಲ್ಡ್, ಏರ್ಪೋರ್ಟ್, ಬನ್ನೇರುಘಟ್ಟ ಸೇರಿ ಹಲವೆಡೆ ಸಂಚಾರ ಮಾಡ್ತಿವೆ.ಈ ಮೊದಲು 1.70 ಲಕ್ಷದಿಂದ 1.75 ಲಕ್ಷದವರೆಗೆ ಪ್ರಯಾಣಿಕರು ಓಡಾಡುತ್ತಿದ್ರು ಆದ್ರೆ ಕಳೆದ ಒಂದು ವಾರದಲ್ಲಿ 1.80 ಲಕ್ಷವರಿಗೂ ಪ್ರಯಾಣಿಕರು ಪ್ರಯಾಣ ಮಾಡ್ತಿದಾರೆ. ಈ ಮೊದಲ ನಿತ್ಯ ವೋಲ್ವೋ ಕಾರ್ಯಾಚರಣೆ ಅದಾಯ 67 ರಿಂದ 70 ಲಕ್ಷ ಬರುತ್ತಿತ್ತು. ಆದದೀಗ ನಿತ್ಯ 70 ರಿಂದ 73 ಲಕ್ಷ ಆದಾಯ ಸಂಗ್ರಹ ಆಗುತ್ತಿದ್ದು, 2.5 ರಿಂದ 3 ಲಕ್ಷದವರಿಗೂ ಕಾರ್ಯಾಚರಣೆ ಆದಾಯ ಸಿಗುತ್ತಿದೆಯೆಂತೆ.
ಕಳೆದ ಹಲವು ವರ್ಷಗಳಿಂದ ಬಿಎಂಟಿಸಿ ವೋಲ್ಬೋ ಬಸ್ ಗಳು ಹೊರೆಯಾಗಿದ್ದವು. ಇದೀಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ BMTC ವೋಲ್ವೋ ಬಸ್ ಗಳೂ ಗಣನೀಯವಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆದಾಯದಲ್ಲಿ ಸುಧಾರಣೆ ಕಂಡಿರೋದು BMTCಗೆ ಗುಡ್ ನ್ಯೂಸ್