ಬೆಂಗಳೂರು: ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ನಿಂತಿಲ್ಲ. ಕಳೆದ ಮೂರು ವರ್ಷಗಳಲ್ಲಿ 79,057 ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಹೌದು, ಬೆಂಗಳೂರು ನಗರದ ಕೆಲವು ಗಲ್ಲಿಗಳಲ್ಲಿ ನಡೆದಾಡಲೂ ಭಯದ ವಾತಾವರಣ ಇದೆ. ಬೈಕ್ ಸವಾರರ ಮೇಲೂ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಬೀದಿ ನಾಯಿಗಳ ಕಾಟದಿಂದಾಗಿ ರಸ್ತೆಯಲ್ಲಿ ರಾತ್ರಿ ಹೊತ್ತು ನಡೆದಾಡಲೂ ಭಯಪಡುವಂತಾಗಿದೆ.
ಕೆಲವೊಂದು ಘಟನೆಗಳು ನಡೆದಾಗ ಎಚ್ಚೆತ್ತುಕೊಳ್ಳುವ ಬಿಬಿಎಂಪಿ ಅಧಿಕಾರಿಗಳು ನಂತರದಲ್ಲಿ ಸೈಲೆಂಟ್ ಆಗಿ ಕೂತಿರುತ್ತಾರೆ. ಆದರೆ ಈ ಹಾವಳಿಗೆ ಪರಿಹಾರ ಮಾತ್ರ ಸಿಗುತ್ತಿಲ್ಲ. ಬೀದಿ ನಾಯಿಗಳ ಹಾವಳಿಯನ್ನು ಕಡಿಮೆ ಮಾಡಲು ಬಿಬಿಎಂಪಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿವೆ.
ಸಿಟಿಯಲ್ಲಿ ಹಿಂಡು ಹಿಂಡಾಗಿ ಬೀದಿನಾಯಿಗಳು ದಾಂಗುಡಿ ಇಡುತ್ತಿದ್ದು, ಮಕ್ಕಳ ಮೇಲೆ ಹೆಚ್ಚಾಗಿ ಎಗುರಿ ಬೀಳ್ತಿವೆ. ಕಳೆದ ಕೆಲವು ದಿನಗಳಿಂದ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಮಕ್ಕಳ ಮೇಲಿನ ದಾಳಿ ಪ್ರಕರಣ ಹೆಚ್ಚಾಗುತ್ತಿವೆ ಹೀಗಾಗಿ ಪಾಲಿಕೆ ನಾಯಿ ಕಡಿತ ಪ್ರಕರಣ ತಪ್ಪಿಸಲು ಜಾಗೃತಿ ಅಭಿಯಾನಕ್ಕೆ ಮುಂದಾಗಿದೆ. ನಾಯಿಗಳ ಕಡಿತಕ್ಕೆ ಕಾರಣ ಏನು? ಬೀದಿ ನಾಯಿಗಳಿಂದ ಸುರಕ್ಷಿತವಾಗಿರಲು ಏನು ಮಾಡಬೇಕು? ಯಾವ ರೀತಿಯಾಗಿ ಬೀದಿ ನಾಯಿಗಳಿಂದ ಪಾರಾಗಬೇಕು ಅಂತಾ ಶಾಲಾ ಮಕ್ಕಳು ಹಾಗೂ ಜನರಿಗೆ ಜಾಗೃತಿ ಮೂಡಿಸಲು ಪಾಲಿಕೆ ಮುಂದಾಗಿದೆ.
ಬಿಬಿಎಂಪಿಯ ಮಾರ್ಗಸೂಚಿಯಲ್ಲೇನಿದೆ?
- ಬೀದಿ ನಾಯಿ, ಸಾಕು ನಾಯಿ ಕಂಡಾಗ ಆರೋಗ್ಯದ ಬಗ್ಗೆ ಗಮನ
- ಅನಾರೋಗ್ಯದಿಂದ ಇರೋ ನಾಯಿಗಳಿಂದ ದೂರವಿರಿ
- ನಾಯಿಗಳು ಕಚ್ಚಿದ್ರೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕು
- ಬೀದಿ ನಾಯಿಗಳ ಕಂಡಾಗ ತೊಂದರೆ ನೀಡಬಾರದು
- ನಾಯಿಗಳಿಗೆ ಯಾವುದೇ ಪ್ರಚೋದನೆ,ಕಿರಿಕ್ ಮಾಡಬಾರ್ದು
- ನಾಯಿಗಳಿಗೆ ತೊಂದರೆ ಕೊಟ್ರೆ ಮಾತ್ರ ಅಟ್ಯಾಕ್ ಮಾಡುತ್ತವೆ
- ಕಚ್ಚುವ ನಾಯಿಗಳು ತೀಕ್ಷ್ಣವಾದ ನೋಟ, ಬಿದ್ದ ದವಡೆ ಹೊಂದಿರುತ್ತವೆ
ನಾಯಿಗಳು ಕಚ್ಚಿದ್ರೆ ಪಶುಸಂಗೋಪನಾ ಇಲಾಖೆ ಸಂಪರ್ಕ ಮಾಡಿ ತಿಳಸಬೇಕು. ಪಶುಸಂಗೋಪನಾ ಇಲಾಖೆ ಸಂಪರ್ಕಿಸಿ ಪರಿಹಾರ ಪಡೆಯಬೇಕು. ನಾಯಿಗಳ ಮೇಲೆ ದಾಳಿಗೆ ಮುಂದಾಗಬಾರದು. ನಾಯಿಗಳಿಂದ ಅಪಾಯ ಅಂತಾ ಗೊತ್ತಾದ್ರೆ ದೂರದಿಂದ ಸಾಗುವಂತೆ ಬಿಬಿಎಂಪಿ ಸಲಹೆ ನೀಡಿದೆ. ನಾಯಿಗಳ ಜೊತೆ ಪ್ರೀತಿಯಿಂದ ವರ್ತಿಸಿ. ಕೋಪಗೊಂಡ ನಾಯಿಗಳು ಸಾಮಾನ್ಯವಾಗಿ ಗುರಾಯಿಸು ವುದು, ಬೀಳುವ ದವಡೆ, ಬೀಳುವ ನಾಲಿಗೆ, ಹೇರಳವಾದ ಜೊಲ್ಲು ಸುರಿಸುವುದು. ತಿಳಿದ ದಿಕ್ಕಿನಕಡೆ ಓಡುವ ಲಕ್ಷಣ ಹೊಂದಿರುತ್ತವೆ ಹೀಗಾಗಿ ಇತಂಹ ಲಕ್ಷಣ ಹೊಂದಿರುವ ನಾಯಿಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳವಂತೆ ಸಲಹೆ ನೀಡಿದ್ದು ಈ ಬಗ್ಗೆ ಜಾಗೃತಿಗೆ ಪಾಲಿಕೆ ಮುಂದಾಗಿದೆ.