ಮಂಡ್ಯ: ಕೌಟುಂಬಿಕ ಕಲಹ ಹಿನ್ನೆಲೆ ಪಾಪಿ ತಂದೆ ಇಬ್ಬರು ಪುಟ್ಟ ಮಕ್ಕಳ ಕುತ್ತಿಗೆ ಕೂದು ಕೊಲೆ ಮಾಡಿ ತನ್ನ ಮಡದಿಗೂ ಮಾರ ಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದ ಫಾಂ ಹೌಸ್ನಲ್ಲಿ ಜರುಗಿದೆ. ನಾಲ್ಕು ವರ್ಷದ ಆದರ್ಶ ಹಾಗೂ ಎರಡು ಅಮೂಲ್ಯ ತಂದೆಯಿಂದ ಕೊಲೆಯಾದ ದುರ್ದೈವಿ ಮಕ್ಕಳಾಗಿದ್ದಾರೆ. ಶ್ರೀಕಾಂತ್ ಎಂಬ ಪಾಪಿ ತಂದೆ ತನ್ನ ಇಬ್ಬರು ಮಕ್ಕಳನ್ನು ಕೊಂದು ತನ್ನ ಪತ್ನಿ ಲಕ್ಷ್ಮೀಗೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಶ್ರೀಕಾಂತ್ ಗುಲ್ಬರ್ಗ ಜಿಲ್ಲೆಯ ಗಾಣಗಪುರ ಗ್ರಾಮದವರಾಗಿದ್ದು, ಲಕ್ಷ್ಮಿ, ಶ್ರೀಕಾಂತ್ ಮದುವೆಯಾಗಿ 6 ವರ್ಷಗಳಾಗಿತ್ತು. ಮದುವೆಯಾ ದಾಗಿನಿಂದ ಒಂದೆಲ್ಲಾ ಒಂದು ವಿಚಾರಕ್ಕೆ ಗಲಾಟೆಯಾಗುತ್ತಿತ್ತು. ನಿನ್ನೆ ಶ್ರೀಕಾಂತ್ ತನ್ನ ತಂದೆ ತಾಯಿ ಜೊತೆ ಗಲಾಟೆ ಮಾಡಿಕೊಂಡು ಶ್ರೀರಂಗಪಟ್ಟಣ ಸಮೀಪದ ಮರಳಗಾಲ ಗ್ರಾಮದ ವಿರುಪಾಕ್ಷ ಎಂಬುವವರ ತೋಟದ ಮನೆಯಲ್ಲಿ ಕೆಲ ಮಾಡುತ್ತಿದ್ದ ಅತ್ತೆ-ಮಾವನ ಮನೆಗೆ ಬಂದಿದ್ದಾರೆ.
ಬಳಿಕ ಇಲ್ಲೇ ಒಂದು ಕೆಲಸ ಕೊಡಿಸಿ ನಾವು ಇಲ್ಲಿಯೇ ಇರುತ್ತೇವೆ ಎಂದು ಶ್ರೀಕಾಂತ್ ಹೇಳಿದ್ದಾನೆ. ಬಳಿಕ ಅತ್ತೆ-ಮಾವ ಸರಿ ಎಂದು ಹೇಳಿ ಎಲ್ಲರೂ ಊಟ ಮಾಡಿ ಪ್ರತ್ಯೇಕ ಮನೆಯಲ್ಲಿ ಮಲಗಿದ್ದಾರೆ. ಬೆಳಗಿನ ಜಾವ ಇದ್ದಕ್ಕಿದ್ದ ಹಾಗೆ ಶ್ರೀಕಾಂತ್ ಲಕ್ಷ್ಮೀಗೆ ಸುತ್ತಿಗೆಯಿಂದ ಹೊಡೆದಿದ್ದಾನೆ, ಹೊಡೆದ ರಭಸಕ್ಕೆ ಲಕ್ಷ್ಮೀ ರಕ್ತದ ಮಡುವಿನಲ್ಲಿ ಒದ್ದಾಡಿದ್ದಾಳೆ. ಬಳಿಕ ಪಕ್ಕದಲ್ಲಿ ಇದ್ದ ಮಕ್ಕಳ ಕುತ್ತಿಗೆ ಕೂದು ಪಾಪಿ ಶ್ರೀಕಾಂತ್ ಪರಾರಿಯಾಗಿದ್ದಾನೆ.
ಬಳಿಕ ಲಕ್ಷ್ಮೀ ತಾಯಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಜೀವ ಇದ್ದ ಲಕ್ಷ್ಮೀಯನ್ಮು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಏನು ತಪ್ಪ ಮಾಡದ ಎರಡು ಮುದ್ದಾದ ಜೀವಗಳು ತಂದೆಯಾ ಕ್ರೌರ್ಯಕ್ಕೆ ಬಲಿಯಾಗಿವೆ. ಈ ಬಗ್ಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶ್ರೀಕಾಂತ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಪ್ರಕರಣ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಆರೋಪಿಗೆ ಕಠಿಣ ಕ್ರಮ ನೀಡಬೇಕೆಂದು ಆಗ್ರಹಿಸಿದ್ದಾರೆ.