ಹಾಸನ: ಮಗಳ ಸಾವಿನ ಸುದ್ದಿ ಕೇಳಿ ತಾಯಿಯೂ ಸಾವನ್ನಪ್ಪಿರುವ ಮನಕಲಕುವ ಘಟನೆ ಹಾಸನ ನಗರದ, ದಾಸರಕೊಪ್ಪಲಿನಲ್ಲಿ ನಡೆದಿದೆ. ಮನೆಯ ಒಡತಿಗೆ ಭೋಗ್ಯದಾರರ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಮನೆಯ ಒಡತಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು,ಮಗಳ ಸಾವಿನ ಸುದ್ದಿ ಕೇಳಿ ಅಘಾತದಿಂದ ತಾಯಿ ಕೂಡ ಸಾವನ್ನಪ್ಪಿದ್ದಾರೆ. 55 ವರ್ಷದ ಲಲಿತಾ ಹಾಗೂ 75 ವರ್ಷದ ತಾಯಿ ಲಕ್ಷ್ಮಮ್ಮ ಮೃತ ದುರ್ದೈವಿ ಗಳಾಗಿದ್ದು,
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ . ದಾಸರಕೊಪ್ಪಲು ಬಡಾವಣೆಯಲ್ಲಿ ವಾಸಕ್ಕೆ ಹಾಗೂ ಬಾಡಿಗೆ, ಭೋಗ್ಯಕ್ಕಾಗಿ ಲಲಿತಾ ಹಾಗೂ ಪತಿ ನಾಗರಾಜ ಮನೆಗಳನ್ನು ನಿರ್ಮಿಸಿಕೊಂಡಿದ್ದರು ಮನೆಯ ಕೆಳಭಾಗದ ನೆಲ ಮಹಡಿಯಲ್ಲಿ ಲಲಿತಾ ಹಾಗೂ ನಾಗರಾಜ ವಾಸವಾಗಿದ್ದ ವೇಳೆ ಮೇಲ್ಭಾಗದ ಮನೆಗಳನ್ನು ಲಲಿತಾ ಬಾಡಿಗೆ ಮತ್ತು ಭೋಗ್ಯಕ್ಕೆ ನೀಡಿದ್ದರು.
ಮೊದಲ ಮಹಡಿಯ ಉತ್ತರ ಭಾಗದ ಮನೆಯನ್ನು, ಎರಡು ವರ್ಷದ ಹಿಂದೆ ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ-ನಟರಾಜ ದಂಪತಿಗೆ ಐದು ಲಕ್ಷ ರೂ ಹಣ ಪಡೆದು ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ನೀಡಿದ್ದು ಒಂದು ವರ್ಷದ ನಂತರ ವಿನಾಃ ಕಾರಣ ಲಲಿತಾ ಅವರೊಂದಿಗೆ ಬಾಡಿಗೆ ದಾರರಾದ ಸುಧಾರಣಿ-ನಟರಾಜ ದಂಪತಿ ಜಗಳ ತೆಗೆಯುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಲಲಿತ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು.
ಇದೇ ವಿಚಾರಕ್ಕೆ ಒಮ್ಮೆ ನಾಗರಾಜ ಮತ್ತು ಲಲಿತಾ ಅವರ ಮೇಲೆ ಸುಧಾರಾಣಿ ಮತ್ತು ನಟರಾಜ ಹಲ್ಲೆಗೆ ಮುಂದಾಗಿದ್ದು, ಜೂ.16 ರಂದು ಸರ ಕದ್ದಿದ್ದೀಯಾ ಕಳ್ಳಿ ಎಂದು ಜಗಳ ತೆಗೆದು ಲಲಿತಾಗೆ ಬಾಡಿಗೆ ದರಾರದ ಸುಧಾರಾಣಿ ಬಾಯಿಗೆ ಬಂದಂತೆ ಬೈಯ್ದಿದ್ದರು. ಅಂದು ಸಂಜೆ 5.30 ರ ಸುಮಾರಿನಲ್ಲಿ ಪುನಃ ಜಗಳ ತೆಗೆದು ಲಲಿತಾ ಅವರಿಗೆ ನಟರಾಜ ಮತ್ತು ಸುಧಾರಾಣಿ ದಂಪತಿ ಬಾಯಿಗೆ ಬಂದಂತೆ ಬೈದು ಅವರ ಮೇಲೆ ಹಲ್ಲೆ ಮಾಡಲು ಹೋಗಿದ್ದಾರೆ.
ಇದರಿಂದ ಬೇಸರಗೊಂಡು ಮನೆ ಒಡತಿ ಲಲಿತಾ ಮನೆ ಬಿಟ್ಟು ಹೋಗಿದ್ದು ಲಲಿತಾ ಪತಿ ಎಲ್ಲಾ ಕಡೆ ಹುಡುಕಾದಿದ್ದಾರೆ ನಂತರ ಜೂ.17 ರಂದು ಬೆಳಿಗ್ಗೆ ನಂಜದೇವರಕಾವಲು ಗ್ರಾಮದ ಅವರ ಜಮೀನಿನಲ್ಲಿ ಮೃತಃ ಲಲಿತಾ ಕಳೆನಾಶಕ ಕುಡಿದು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದು, ಕೂಡಲೇ ಪತಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂ.20 ರಂದು ರಾತ್ರಿ ಲಲಿತಾ ಸಾವನ್ನಪ್ಪಿದ್ದ್ದಾರೆ, ಮಗಳ ಸಾವಿನ ಸುದ್ದಿ ಕೇಳಿ ಲಲಿತಾ ತಾಯಿ ಲಕ್ಷಮ್ಮ (75) ಕೂಡ ನಿನ್ನೆ ಅವನ್ನಪ್ಪಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ ಈ ಕುರಿತು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ