ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ವಿಧಾನಸಭೆಯ ಅಧಿವೇಶನದ ಕಲಾಪಗಳನ್ನ ನೇರ ಪ್ರಸಾರ ಮಾಡಲು ಘನ ಮಾಧ್ಯಮಗಳಿಗೆ ನಿಷೇಧವನ್ನು ಏರಿತ್ತು ಈಗ ನೇರ ಪ್ರಸಾರವನ್ನು ಮುಂದುವರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಿಷೇಧವನ್ನು ರದ್ದುಪಡಿಸಿ ನೇರಪ್ರಸಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರಿಗೆ ವಿನಂತಿಸಿದ್ದಾರೆ.
ಏನೆಂದರೆ ಹಿಂದಿನ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ರವರ ಕ್ರಮವನ್ನು ಖಂಡಿಸಿ ನಾವು ಸಹ ಪ್ರತಿಭಟನೆ ನಡೆಸಿದ್ದೆವು ತಾವು ಈಗ ನೂತನವಾಗಿ ಸಭಾಧ್ಯಕ್ಷರಾಗಿರುವುದರಿಂದ ತಮಗೆ ಈ ಎಲ್ಲ ವಿಷಯಗಳ ಮಾಹಿತಿ ದೊರಕಿರುತ್ತದೆ ಹಾಗೆ ತಾವು ಆ ಸಂದರ್ಭದಲ್ಲಿ ವಿರೋಧ ಪಕ್ಷದ ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದೀರಿ.
ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಅತೀ ಹೆಚ್ಚು ಚರ್ಚೆ ವಿಧಾನಸಭೆಯಲ್ಲಿ ನಡೆಯುತ್ತಿದ್ದರಿಂದ ಅಂದಿನ ಸಭಾಧ್ಯಕ್ಷರು ಮಾಧ್ಯಮಗಳಿಗೆ ಅವಕಾಶ ನೀಡಿರಲಿಲ್ಲ ಮಾಧ್ಯಮಗಳಿಗೆ ನಿಷೇಧವನ್ನು ಏರಿದ್ದರು ಆ ರೀತಿ ಇಂದು ಆಗ ಕೂಡದು ಆದ್ದರಿಂದ ತಾವು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವುದರಿಂದ ತಾವುಗಳು ಹಿಂದಿನ ಅಧ್ಯಕ್ಷರ ಆದೇಶವನ್ನು ರದ್ದುಪಡಿಸಿಮುಕ್ತವಾಗಿ ನೇರ ಪ್ರಸಾರ ಮಾಡಲು ಮಾಧ್ಯಮಗಳಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಕೇಳಿಕೊಂಡರು.