ರಾಯಚೂರು;– ಪೊಲೀಸ್ ಭದ್ರತೆ ನಡುವೆಯೂ ತುಂಗಭದ್ರ ಎಡದಂಡೆ ಕಾಲುವೆ 51ನೇ ಉಪ ಕಾಲುವೆ ನೀರು ಕಳ್ಳತನ ನಡೆದಿರುವ ಘಟನೆ ಜರುಗಿದೆ.
144 ನಿಷೇಧಾಜ್ನೆ ಜಾರಿಯಲ್ಲಿದ್ರು ಉಪ ಕಾಲುವೆ ಗೇಟ್ ಎತ್ತಿ ನೀರು ಕಳ್ಳತನ ಮಾಡಲಾಗಿದೆ. ಪೊಲೀಸರ ಕಣ್ತಪ್ಪಿಸಿ ಉಪ ಕಾಲುವೆಗೆ ಬಲಾಢ್ಯ ರೈತರು ನೀರು ಆರಿಸಿಕೊಂಡಿದ್ದಾರೆ.
ಕುಡಿಯುವ ನೀರಿನ ಕೆರೆಗಳನ್ನ ತುಂಬಿಸಲು ಎಡದಂಡೆ ಮುಖ್ಯ ಕಾಲುವೆಗೆ ನೀರು ಬಿಡುಗಡೆ ಮಾಡಲಾಗಿದ್ದು, ಕೃಷಿ ಚಟುವಟಿಕೆಗೆ ಕಾಲುವೆ ನೀರು ಬಳಸದಂತೆ ನಿಷೇಧ ಏರಿ ಕಾಲುವೆಯುದ್ದಕ್ಕು ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.ಪೊಲೀಸ್ ಬದ್ರತೆ ನಡುವೆ ರಾಯಚೂರ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗ್ತಿದೆ. ಈ ಮಧ್ಯೆ ಮಸ್ಕಿ ಬಳಿ ಕೆಲ ಬಲಾಢ್ಯ ರೈತರು ಕಾಲುವೆ ನೀರು ದೊಚಿದ ಘಟನೆ ನಡೆದಿದೆ.
ಕುಡಿಯುವ ನೀರು ಪೂರೈಕೆ ನಿರ್ವಹಣೆಯಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಈ ಹಿನ್ನೆಲೆ ರಾಯಚೂರ ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದೆ.