ರಬಕವಿ-ಬನವಟ್ಟಿ;- ಮತಾಂತರ, ಗೋಹತ್ಯೆ ಕಾಯ್ದೆ ಹಿಂಪಡೆದು ಹಿಂದೂಗಳಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಯುವ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯ ಸರ್ಕಾರ ಯೋಜನೆ ಗ್ಯಾರಂಟಿಗಳ ಮಧ್ಯೆ ಗೋವುಗಳ ಬದುಕಿನ ಗ್ಯಾರಂಟಿ ಉಳಿಸಬೇಕಿತ್ತು. ಬದಲಾಗಿ ಮತಾಂತರ ಹಾಗು ಗೋ ಹತ್ಯೆ ಕಾಯ್ದೆ ರದ್ದುಗೋಳಿಸುವ ಮೂಲಕ ಬಹುಸಂಖ್ಯಾತ ಹಿಂದೂಗಳಿಗೆ ಅವಮಾನ ಮಾಡಿದೆ.
ಹಿಂದಿನಿಂದಲೂ ಕಾಂಗ್ರೆಸ್ ಹಿಂದೂಗಳ ವಿರುದ್ಧವೇ ಕಾಯ್ದೆ ತರುವ ಮೂಲಕ ಮೂಲ ಸಿದ್ಧಾಂತಗಳಿಗೆ ನಿರಂತರವಾಗ ಕೊಡಲಿ ಏಟು ನೀಡುತ್ತಿದೆ. ಈಗಲೂ ಅದೇ ಚಾಳಿ ಮುಂದುವರಿಸಿದ್ದು, ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲವೆಂದು ಹೇಳಿದರು.
ದೇಶಕ್ಕಾಗಿ ಉಗ್ರ ಕಾಳಾಪಾನಿ ಶಿಕ್ಷೆ ಹಾಗೂ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸಾವರ್ಕರ್, ಭಗತ್ಸಿಂಗ್ರ ಪಠ್ಯ ತೆಗೆಯಲು ಅವರೇನು ಭಯೋತ್ಪಾದಕರಾ? ಎಂದು ಆಕ್ರೋಶ ವ್ಯಕ್ತಪಡಿಸಿದ ಸೂಲಿಬೆಲೆ, ಹಿಂದೂ ಧರ್ಮವನ್ನು ಅವಮಾನಗೊಳಿಸುವುದನ್ನು ನಿಲ್ಲಿಸಬೇಕಿದೆ ಎಂದು ಎಚ್ಚರಿಸಿದರು.
ಧಾರ್ಮಿಕ ಅಸಹಿಷ್ಣುತೆ ಹೆಚ್ಚಿಸುವತ್ತ ಗೋ ಹತ್ಯೆ ನಡೆಸುತ್ತ, ಖಚಿತವಲ್ಲದ ಉಚಿತ ಯೋಜನೆಗಳ ಮಧ್ಯದಲ್ಲಿ ಜನರ ಬಾಯಿ ಮುಚ್ಚಿಸುವ ಕುತಂತ್ರ ಸರ್ಕಾರದಿಂದ ನಡೆಯುತ್ತಿದೆ. ಇವೆಲ್ಲದರ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.