ಬೆಂಗಳೂರು ;- ರಾಜಧಾನಿ ಬೆಂಗಳೂರು ಮಹಿಳೆಯರೆ ಎಚ್ಚರ..ಎಚ್ಚರ.
ಹುಡುಗಿಯರು ಸ್ನಾನ ಮಾಡುವ ವಿಡಿಯೋವನ್ನು ಕಾಮುಕನೊಬ್ಬ ಕದ್ದು ಮುಚ್ಚಿ ತಗಿತಾನೆ ಎಚ್ಚರ.
ಹೌದು ಇಲ್ಲೊಬ್ಬ ಕಾಮುಕನೊಬ್ಬ ಲೇಡಿಸ್ ಪಿಜಿಯನ್ನೇ ನೋಡುತ್ತಾ ಇರುತ್ತಿದ್ದ. ಯುವತಿಯರು ಸ್ನಾನಕ್ಕೆ ಹೋದಾಗ ಅದರ ವಿಡಿಯೋ ಮಾಡಿ ಮಜಾ ತೆಗೆದುಕೊಳ್ಳುತ್ತಾನೆ. ಇದೇ ರೀತಿ ಯುವತಿಯರ ಸ್ನಾನದ ವಿಡಿಯೋ ಸೆರೆ ಹಿಡಿಯುವಾಗ ಕಾಮುಕ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಯುವಕ ಎಂದು ಗುರುತಿಸಲಾಗಿದೆ.
ಮಹದೇವಪುರ ಹೂಡಿಯಲ್ಲಿರುವ ಪಿಜಿ ನಲ್ಲಿ ಆರೋಪಿ ಅಶೋಕ್ ವಾಸ ಮಾಡ್ತಿದ್ದ. ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಈತನ ಕಾಮ ಪುರಾಣ ಬಯಲಾಗಿದೆ. ಅಶೋಕ್ ವಾಸ ಮಾಡ್ತಿದ್ದ ಪಿಜಿ ಮುಂಭಾಗದಲ್ಲೇ ಲೇಡಿಸ್ ಪಿಜಿ ಇತ್ತು. ಲೇಡಿಸ್ ಪಿಜಿ ಸ್ನಾನದ ರೂಂ ಅನ್ನೇ ಅಶೋಕ್ ನೋಡುತ್ತಾ ಕುಳಿತಿರ್ತಿದ್ದ. ಯುವತಿಯತಿಯರು ಸ್ನಾನ ಮಾಡಲು ಬರ್ತಿದ್ದಂತೆ ಆರೋಪಿ ಅಲರ್ಟ್ ಆಗ್ತಿದ್ದು, ಸ್ನಾನ ಮಾಡ್ತಿದ್ದ ವಿಡಿಯೋ ವೆಂಟಿಲೇಷನ್ ಮೂಲಕ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ.
ಹೀಗೆ ಸ್ನಾನ ಮಾಡ್ತಿದ್ದ ವಿಡಿಯೋ ಚಿತ್ರೀಕರಿಸ್ತಿದ್ದಂತೆ ರೆಡ್ ಹ್ಯಾಂಡ್ ಆಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಜೂನ್ 21 ರಂದು ಆರೋಪಿ ಅಶೋಕ್ ನನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ ಹಿಡಿದು ಸ್ಥಳೀಯರು ಮಹದೇವಪುರ ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿ ಮೊಬೈಲ್ ಪರಿಶೀಲನೆ ವೇಳೆ ಬೆಚ್ಚಿ ಬೀಳಿಸೋ ಸತ್ಯ ಹೊರಬಿದ್ದಿದೆ. ಅಶೋಕ್ ಮೊಬೈಲ್ ನಲ್ಲಿ 7 ಯುವತಿಯರ ಸ್ನಾನದ ವಿಡಿಯೋ ಪತ್ತೆಯಾಗಿದ್ದು, ಆರೋಪಿ ಬಂಧಿಸಿ
ಮಹದೇವಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.