ಬೆಂಗಳೂರು: ಕರ್ನಾಟಕ ಸರ್ಕಾರಕ್ಕೆ ಮತ್ತೆ ಅಕ್ಕಿ ಸಮಸ್ಯೆ ಬಿಗಡಾಯಿಸಿದೆ. ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಖಡಕ್ ಉತ್ತರ ನೀಡಿದ್ದರಿಂದ ರಾಜ್ಯಕ್ಕೆ ಅಕ್ಕಿ ಟೆನ್ಶನ್ ಮತ್ತಷ್ಟು ಗಂಭೀರವಾಗಿದೆ.
ಸದ್ಯ ಸರ್ಕಾರಕ್ಕೆ ಇರುವ ಕೊನೆ ದಾರಿ ಕೇಂದ್ರ 3 ಸಂಸ್ಥೆಗಳು ಮಾತ್ರ. ಭಾರತ ಸರ್ಕಾರದ ಅಧೀನದ ನ್ಯಾಷನಲ್ ಕೋ-ಆಪರೇಟಿವ್ ಕನ್ಸೂಮರ್ಸ್ ಫೆಡರೇಷನ್ (NCCF), ನ್ಯಾಷನಲ್ ಅಗ್ರಿಕಲ್ಬರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ (NAFED) ಹಾಗೂ ಕೇಂದ್ರೀಯ ಭಂಡಾರದಿಂದ (Kendriya Bhandar) ಅಕ್ಕಿ ಪಡೆಯಲು ದರಪಟ್ಟಿ ಕೇಳಲಾಗಿದೆ.
ಎನ್ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರದಿಂದ ಅಕ್ಕಿ ಬಂದರೆ ಕರ್ನಾಟಕ ಸರ್ಕಾರ ಪಾರಾಗುತ್ತದೆ. ಇಲ್ಲ ಅಂದರೆ ಅಕ್ಕಿಗೆ ಸಂಗ್ರಹಕ್ಕೆ ಮುಕ್ತ ಮಾರುಕಟ್ಟೆಯ ಮೊರೆ ಹೋಗಬೇಕಾದ ಅನಿವಾರ್ಯತೆ ನಿರ್ಮಾಣ ಆಗುತ್ತದೆ. ಈಗಾಗಲೇ ಒಂದು ಸಂಸ್ಥೆ ಕೊಟೇಶನ್ ಕೊಟ್ಟಿರುವ ಬಗ್ಗೆ ಮಾಹಿತಿ ಇದೆ. ಯಾವ ಸಂಸ್ಥೆ, ಎಷ್ಟು ಕೊಟೇಶನ್ ಅಂತ ಮಾಹಿತಿಯನ್ನು ಮಾತ್ರ ಆಹಾರ ಸಚಿವರು ನೀಡಿಲ್ಲ.
ಮುಂದಿರುವ ಆಯ್ಕೆಯೇನು?
ಎನ್ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರ ಸಂಸ್ಥೆಗಳೇ ಕೊನೆ ಆಯ್ಕೆ. ಈಗಾಗಲೇ ಒಂದು ಸಂಸ್ಥೆ ಕೊಟೇಶನ್ ಕೊಟ್ಟಿರುವ ಬಗ್ಗೆ ಸಚಿವರ ಮಾಹಿತಿ ನೀಡಿದ್ದಾರೆ. ಕೊಟೇಶನ್ ವಿವರದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.
ಸರ್ಕಾರಕ್ಕೆ ಒಪ್ಪಿಗೆ ಆಗದೇ ಇದ್ದರೆ ಉಳಿದ 2 ಸಂಸ್ಥೆಗಳ ಕೊಟೇಶನ್ಗೆ ಕಾಯಬೇಕು. ಆ ಎರಡು ಸಂಸ್ಥೆಗಳ ಕೊಟೇಶನ್ ಸರ್ಕಾರಕ್ಕೆ ಒಪ್ಪಿಗೆ ಆದರೆ ಅಕ್ಕಿ ಖರೀದಿ ಮಾಡುತ್ತದೆ. ಆ 2 ಸಂಸ್ಥೆಗಳ ಕೊಟೇಶನ್ ಒಪ್ಪದೇ ಇದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಬೇಕಾಗುತ್ತದೆ.