ಬೆಂಗಳೂರು ;– ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ಪ್ರಮಾಣಪತ್ರ ಪಡೆಯಬೇಕಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಕಲಬುರಗಿಯ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕರ್ನಾಟಕ ಮುನಿಸಿಪಾಲಿಟಿ ಕಾಯಿದೆ ಸೆಕ್ಷನ್ 94 (1-ಎ) (ಐ) ಅಡಿ ಶೈಕ್ಷಣಿಕ ಸಂಸ್ಥೆಗಳ ಆಸ್ತಿ ತೆರಿಗೆ ಪಾವತಿಗೆ ಬ್ಲಾಂಕೆಟ್ ವಿನಾಯಿತಿ ಇಲ್ಲ. ಅವು ಪ್ರತಿ ವರ್ಷ ವಿನಾಯಿತಿ ಕೋರಿ ಸಿಎಂಸಿಯಿಂದ ಸರ್ಟಿಫಿಕೆಟ್ಗೆ ಅರ್ಜಿ ಸಲ್ಲಿಸಬೇಕು. ಆ ಬಗ್ಗೆ ಪರಿಶೀಲಿಸುವ ಸಿಎಂಸಿ ತನಗೆ ಎಲ್ಲ ಮಾನದಂಡಗಳು ಸರಿಯಾಗಿವೆ ಎಂಬುದು ಮನವರಿಕೆಯಾದರೆ ಸರ್ಟಿಫಿಕೆಟ್ ವಿತರಿಸಲಿದೆ ಎಂದು ವಾದಿಸಿದ್ದರು. ಅಲ್ಲದೆ, ಸರ್ಟಿಫಿಕೇಟ್ ಇಲ್ಲದೆ, ತೆರಿಗೆ ಪಾವತಿದಾರರು ಯಾವುದೇ ರೀತಿಯಲ್ಲೂ ಸ್ವಯಂ ಪ್ರೇರಿತವಾಗಿ ತೆರಿಗೆ ಪಾವತಿಯಿಂದ ವಿನಾಯಿತಿ ಕೋರಲಾಗದು ಎಂದು ತಿಳಿಸಿದ್ದರು.