ತುಮಕೂರು ;- ಕಾಂಗ್ರೆಸ್ ಗೆ ಮತ ನೀಡಿದ ಹಿನ್ನೆಲೆ ವ್ಯಕ್ತಿಯೊಬ್ಬರಿಗೆ ಸೊಸೈಟಿಯು ಪಡಿತರ ನೀಡದಿರುವ ಘಟನೆ ಜರುಗಿದೆ.
ತುಮಕೂರು ಜಿಲ್ಲೆಯ ತಿಪಟೂರು ನಗರದ ಶಂಕರ್ ಮಠ ಹತ್ತಿರವಿರುವ ಸರ್ಕಾರಿ ನೌಕರರ ಸಹಕಾರ ಸಂಘದಲ್ಲಿ ಘಟನೆ ಜರುಗಿದೆ.
ಸ್ಥಳೀಯರಾದ ಆರ್ ಡಿ ಬಾಬುಗೆ ಪಡಿತರ ನೀಡಲು ನಿರಾಕರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನೀವು ಬಿಜೆಪಿಗೆ ಮತ ನೀಡಿಲ್ಲ ನೀವು ಕಾಂಗ್ರೆಸ್ ನವರು ಎಂದ ಸೊಸೈಟಿ ಸಿಬ್ಬಂದಿ ಹೇಳಿದ್ದು, ಈ ವೇಳೆ ಸೊಸೈಟಿ ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಸೊಸೈಟಿ ವಿರುದ್ಧ ಹೀಗಾಗಲೇ ಹಲವು ದೂರುಗಳಿದ್ದು, ಪದೇ ಪದೇ ಸೊಸೈಟಿ ಹೀಗೆ ಮಾಡುತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕೂಡಲೇ ತಿಪಟೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.