ಶಿವಮೊಗ್ಗ: ಜೋಗ ಜಲಪಾತಕ್ಕೆ ಜೋಗ ಜಲಪಾತವೇ ಸಾಟಿ. ಬಾನೆತ್ತರಿಂದ ಧುಮ್ಮುಕ್ಕುವ ಜೋಗವನ್ನು ನೋಡುವುದೇ ಒಂದು ಅದ್ಬುತ. ಹಚ್ಚ ಹಸಿರಿನ ನಡುವೆ ಹಾಲ್ ನೊರೆಯಂತೆ ದುಮ್ಮುಕ್ಕುವ ಜಲಪಾತವನ್ನು ನೋಡಲು ಎರಡು ಕಣ್ಣು ಸಾಲದು. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜೋಗ ಜಲಪಾತದ ಘತವೈಭವ ಮರೆಯಾಗಿದೆ. ಜೋಗದ ಸಿರಿಯನ್ನು ಸವಿಯಲು ಬರುತ್ತಿರುವ ಪ್ರವಾಸಿಗರು ಬರೀ ಕಲ್ಲುಬಂಡೆಗಳಿಂದಲೇ ತುಂಬಿಕೊಂಡಿರುವ ಜೋಗವನ್ನು ನೋಡಿ ಮರುಗುವ ಸ್ಥಿತಿ ಪ್ರವಾಸಿಗಳಿಗೆ ಬಂದೋದಗಿದ್ದೆ.
ಮಲೆನಾಡಿನ ಪ್ರಕೃತಿ ವೈಭವಕ್ಕೆ ಮರಳಾಗದ ಮನಸೇ ಇಲ್ಲ. ಎತ್ತ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ದಟ್ಟ ಕಾನನ, ಕಾನನದ ಮದ್ಯೆ ಹಾಲ್ ನೋರೆಯಂತೆ ದುಮ್ಮುಕ್ಕಿ ಹರಿಯುವ ಜರಿಗಳು, ಮಂಜಿನ ಹನಿಗಳ ಕಣ್ಣಾ ಮುಚ್ಚಾಲೆ ಆಟ. ಇವೆಲ್ಲವೂ ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಇದಕ್ಕೆ ಜೋಗ ಜಲಪಾತ ಕೂಡ ಹೊರತಾಗಿಲ್ಲ. ಜೋಗ ಜಲಪಾತಕ್ಕೆ ಜೋಗ ಜಲಪಾತವೇ ಸಾಟಿ ಎಂಬಂತೆ ಹಸಿರು ಐಸಿರಿಯ ನಡುವೆ ನಾಲ್ಕು ಕಾವಲುಗಳಾಗಿ ಬೀಳುವ ಶರಾವತಿಯನ್ನ ಕಣ್ಣು ತುಂಬಿಕೊಳ್ಳೋದೆ ಒಂದು ಅನುಭವ. ರಾಜ ಗಾಂಭಿರ್ಯದ ರಾಜ, ಬಳ್ಳಿಯಂತೆ ಬಳುಕುವ ರಾಣಿ, ರಭಸವಾಗಿ ಧುಮ್ಮುಕ್ಕುವ ರಾಕೇಟ್, ಬಂಡೆ ಕಲ್ಲುಗಳನ್ನು ಲೆಕ್ಕಿಸದೆ ಬೀಳುವ ರೋರರ್ಗಳನ್ನು ನೋಡುವುದೇ ಒಂದು ಅದ್ಬುತ. ಹಚ್ಚ ಹಸಿರಿನ ಬೆಟ್ಟದ ಮೇಲಿಂದ ನಾಲ್ಕು ಕವಲುಗಳಾಗಿ ಹರಿಯುವ ಜೋಗ ಜಲಪಾತ ಮಳೆಗಾಲದಲ್ಲಿ ಪ್ರವಾಸಿಗರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತದೆ. ಆದರೆ ಅಂತಹ ಅದ್ಬುತ ಇದೀಗ ಮಾಯವಾಗಿದೆ. ಕೈಕೊಟ್ಟ ಮಳೆಯಿಂದಾಗಿ ಜೋಗದ ಸೊಬಗೆ ಮಾಯವಾಗಿ, ಹಾಳು ಬಿದ್ದಂತಾಗಿದ್ದು ಬರೀ ಬಂಡೆ ಕಲ್ಲುಗಳಿಂದಲೇ ತುಂಬಿದ್ದು, ಬರುವ ಪ್ರವಾಸಿಗರು ಜೋಗೆಯ ಸೊಬಗನ್ನು ನೋಡಲು ಸಾಧ್ಯವಾಗದೇ ನಿರಾಸೆಯಿಂದಲೇ ಹಿಂದುರುಗ ಬೇಕಾದ ಸ್ಥಿತಿ ಬಂದೋದಗಿದೆ.
ಪ್ರವಾಸಿಗರು ಶರಾವತಿ ಒಡಲು ನೀರಿಲ್ಲದೇ ಬರೀದಾಗಿರುವುದರಿಂದ ಜೋಗದಲ್ಲಿ ನೀರು ಕೂಡ ದುಮ್ಮುಕ್ಕುತ್ತಿಲ್ಲ. ಕ್ಷೀರಸಾಗರದಂತೆ ಕಂಗೊಳಿಸುತ್ತಿದ್ದ ಜಲಪಾತವಿಂದು ನೀರು ಇಲ್ಲದೇ ಬಣಗುಡುತ್ತಿದೆ. ಇದು ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ. ಇದರಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕೂಡ ಕಡಿಮೆಯಾಗಿದೆ. ಇನ್ನು ಈ ಬಾರಿ ಜೂನ್ 20 ಕಳೆದರೂ ಶರಾವತಿ ಜಲಾನಯನ ಪ್ರದೇಶ ಹಾಗೂ ಜೋಗ ಜಲಪಾತ ಪ್ರದೇಶದಲ್ಲಿ ಮಳೆಪ್ರಮಾಣ ಕಡಿಮೆಯಾಗಿದೆ..ಕಳೆದ ವರ್ಷ. ಇಷ್ಟ ಹೊತ್ತಿಗಾಗಲೇ ಜೋಗ ಜಲಪಾತ ನೀರಿನಿಂದ ಕಂಗೊಳಿಸುತ್ತಿತ್ತು, ಆದ್ರೆ ಈ ಬಾರಿ ನೀರು ಇಲ್ಲದಿರುವುದಂದು ಪ್ರವಾಸಿಗರಿಗೆ ನಿರಾಸೆ ತಂದಿದೆ..
ಜೂನ್ ತಿಂಗಳಿನಲ್ಲಿ ಜೋಗ ಜಲಪಾತ ನೀರಿಲ್ಲದೇ ಬಣ ಗುಡುತ್ತಿದ್ದು, ಅದರ ಗತವೈಭವ ಇದೀಗ ಮರೆಯಾಗಿದೆ. ಹಾಲ್ ನೊರೆಯಂತೆ ನೀರು ದುಮ್ಮುಕ್ಕುವ ಜಾಗದಲ್ಲಿ ಇದೀಗ ಕಲ್ಲುಬಂಡೆಗಳೇ ಕಾಣುತ್ತಿದ್ದು ಪ್ರವಾಸಿಗರು ನೀರಾಸೆಯಿಂದ ವಾಪಸ್ಸಾಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ವರುಣದೇವ ಕೃಪೆ ತೋರಿ ಸರಿಯಾದ ಮಳೆ ಸುರಿಸುವ ಮೂಲಕ ಜೋಗದ ಗತ ವೈಭವ ಮತ್ತೆ ಮರುಕಳಿಸುವಂತೆ ಮಾಡಲಿ ಎಂಬುದು ಆಶಯ..