ಬೆಂಗಳೂರು: ಜೂನ್ 29 ರಂದು ಮುಸ್ಲಿಂಬಾಂಧವರು ಅದ್ದೂರಿಯಾಗಿ ಬಕ್ರಿದ್ ಹಬ್ಬದಾಚರಣೆ ಮಾಡ್ತಾರೆ.ಹಬ್ಬದ ಸಿದ್ದತೆಗಳೇನೋ ಜೋರಾಗಿಯೇ ನಡೀತಿದೆ.ಆದ್ರೆ ಹಬ್ಬದ ಪ್ರಮುಖ ಆಕರ್ಷಣೆಯಾದ ಕುರಿಗಳ ಖರೀದಿಗೆ ಮಾತ್ರ ಆಸಕ್ತಿ ತೋರುತ್ತಿಲ್ಲ.ಗ್ರಾಹಕರನ್ನು ನೆಚ್ಚಿಕೊಂಡು ಲಕ್ಷಾಂತರ ಬಂಡವಾಳ ಹೂಡಿ ಕುರಿ ತಂದಿದ್ದ ವ್ಯಾಪಾರಿಗಳು ತಲೆಮೇಲೆ ಕೈ ಹೊತ್ತು ಕೂತಿದ್ದಾರೆ.ಅವರ ಪ್ರಕಾರವೇ ನಮ್ ಬ್ಯುಸಿನೆಸ್ ಗೆ ಕಲ್ಲು ಹಾಕಿದ್ದೇ ಕಾಂಗ್ರೆಸ್ ಸರ್ಕಾರವಂತೆ.ಗೋ ಹತ್ಯೆ ನಿಷೇಧ ವಾಪಸ್ ಪಡೆದಿದ್ದರಿಂದಲೇ ಕುರಿಕೊಳ್ಳೊಕ್ಕೆ ಗ್ರಾಹಕರು ಉತ್ಸುಕತೆ ತೋರ್ತಿಲ್ಲ ಎನ್ತಾರೆ.
ಬಕ್ರಿದ್ ವೇಳೆ ವ್ಯಾಪಾರಿಗಳು ಮತ್ತು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತಿದ್ದ ಚಾಮರಾಜಪೇಟೆ ಈದ್ಗಾ ಮೈದಾನದ ಕುರಿ ದೊಡ್ಡ “ಡಲ್” ಹೊಡೀತಿದೆ.ಕುರಿಗಳ ಮಾರಾಟ ಜಬರ್ ದಸ್ತ್ ಆಗಿ ನಡೀಬೋದು ಎಂದು ಲಕ್ಷಾಂತರ ಬಂಡವಾಳ ಹಾಕಿ ಕುರಿ ತಂದಿದ್ದ ವ್ಯಾಪಾರಿಗಳು ತಲೆಮೇಲೆ ಕೈ ಹೊತ್ತು ಕೂತಿದ್ದಾರೆ.ಅವರು ತಂದ ಕುರಿಗಳನ್ನು ಕೇಳೋರೇ ಇಲ್ಲವಾಗಿದೆ.ಗ್ರಾಹಕರು ಕೇಳೋ ರೇಟ್ ವ್ಯಾಪಾರಿಗಳನ್ನು ತಬ್ಬಿಬ್ಬುಗೊಳಿಸ್ತಿದೆ.ನಮ್ ವ್ಯಾಪಾರ ಹೀಗೆ ಡಲ್ ಆಗೊಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ವ್ಯಾಪಾರಿಗಳು ಹಿಡಿಶಾಪ ಹಾಕ್ತಿದಾರೆ.
ಬಕ್ರಿದ್ ಹಬ್ಬದಿಂದಾಗಿ ಕುರಿ ದೊಡ್ಡಿಯತ್ತ ಮುಸ್ಲಿಂಬಾಂಧವರು ದೊಡ್ಡ ಸಂಖ್ಯೆಯಲ್ಲಿ ದಾಳಿ ಇಡುತ್ತಿದ್ದರು.ಆದರೆ ಈ ಬಾರಿ ಕುರಿಗಳು ಸಾವಿರಾರು ಸಂಖ್ಯೆಯಲ್ಲಿ ದೊಡ್ಡಿಗೆ ಬಂದಿದ್ರೂ ಕೊಳ್ಳೋರೇ ಕಡಿಮೆಯಾಗಿದ್ದಾರೆ.ಗ್ರಾಹಕರ ಸಂಖ್ಯೆ ಸಿಕ್ಕಾಪಟ್ಟೆ ಕಡಿಮೆಯಾಗಿದೆ. ಮೈದಾನದಲ್ಲಿ ಕಾಣಸಿಗುತ್ತಿರುವ ಗ್ರಾಹಕರು ಬಾಯಿಗೆ ಬಂದಂಗೆ ರೇಟ್ ಕೇಳ್ತಿದಾರೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ತಾರೆ. ಕುರಿದೊಡ್ಡಿಯಲ್ಲಿ ಕುರಿಗಳ ವ್ಯಾಪಾರ ಶುರುವಾದಾಗಿನಿಂದ ಕೊರೊನಾ ಸಮಯ ಬಿಟ್ಟರೆ ಇನ್ನ್ಯಾವ ಸಮಯದಲ್ಲೂ ಮಾರ್ಕೆಟ್ ಇಷ್ಟೊಂದು ಥಂಡಾ ಹೊಡೆಯುತ್ತಿರಲಿಲ್ಲವೆನ್ನುತ್ತಾರೆ ವ್ಯಾಪಾರಿಗಳು.
ವ್ಯಾಪಾರಿಗಳ ಪ್ರಕಾರ ಅವರು ತಂದ ಕುರಿಗಳನ್ನು ಕೇಳೋರೇ ಇಲ್ಲದಂಥ ಸ್ತಿತಿ ನಿರ್ಮಾಣವಾಗೊಕ್ಕೆ ಇಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಅದರ ತೀರ್ಮಾನಗಳೇ ಕಾರಣವಂತೆ.ಕಾಂಗ್ರೆಸ್ ಸರ್ಕಾರಕ್ಕಿಂತ ಹಿಂದೆ ಬಿಜೆಪಿ ಅಧಿಕಾರ ನಡೆಸಿದಾಗ ಗೋಹತ್ಯೆ ನಿಷೇಶ ಜಾರಿಯಲ್ಲಿತ್ತು.ದನಗಳನ್ನು ಮಾಂಸಕ್ಕಾಗಿ ಕಡಿಯೋರ-ಮಾರೋರ ಸಂಖ್ಯೆ ದಿಢೀರ್ ಕಡಿಮೆಯಾಗಿತ್ತು.ಗ್ರಾಹಕರು ಅನ್ಯವಿಧಿಯಿಲ್ಲದೆ ನಮ್ಮ ಕುರಿಗಳನ್ನೇ ಕೊಳ್ಳಬೇಕಿತ್ತು.ಆದರೆ ಕಾಂಗ್ರೆಸ್ ಸರ್ಕಾರ ಬರ್ತಿದ್ದಂಗೆ ಗೋಹತ್ಯೆ ನಿಷೇದ ವಾಪಸ್ ಪಡೆದಿದೆ ಎನ್ನುವ ಕಾರಣಕ್ಕೆ ಗ್ರಾಹಕರು ಕುರಿ ಕೊಳ್ಳೊಕ್ಕೆ ಮುಂದ ಬರ್ತಿಲ್ಲವಂತೆ.
ಕುರಿಗಳನ್ನು ಕೊಳ್ಳೊಕ್ಕೆ ಬರುವ ಗ್ರಾಹಕರು ಕೇಳುವ ರೇಟ್ ಕೇಳಿದ್ರೆ ಸಿಟ್ಟು ನೆತ್ತಿಗೇರುತ್ತೆ.25 ರಿಂದ 30 ಸಾವಿರ ಕೊಟ್ಟು ತಂದ ಕುರಿಗಳನ್ನು 10-15 ಸಾವಿರಕ್ಕೆ ಕೇಳ್ತಾರೆ.ಅರ್ಧ ಬೆಲೆಗೆ ಕೇಳ್ತಾರೆ.ನಿರಾಕರಿಸಿದ್ರೆ ಬೈಯ್ದು ಹೋಗ್ತಾರೆ.ಹಾಕಿದ ಬಂಡವಾಳವೂ ಗಿಟ್ಟದಂಥ ಸ್ತಿತಿಯಿದೆ.ಹಾಗಾಗಿ ಮುಂದಿನ ಬಾರಿ ಬೆಂಗಳೂರಿಗೆ ಕುರಿಗಳನ್ನೇ ತರಬಾರದು ಎಂದು ಡಿಸೈಡ್ ಮಾಡಿದ್ದೇವೆ ಎಂದೇನೋ ವ್ಯಾಪಾರಿಗಳು ಹೇಳ್ತಾರೆ.ಆದ್ರೆ ರೇಟ್ ಸಿಕ್ಕಾಪಟ್ಟೆ ಕಾಸ್ಟ್ಲಿ ಇದೆ ಎನ್ತಾರೆ ಗ್ರಾಹಕರ
ಇನ್ನು ಒಂದು ವಾರದಿಂದ ದೊಡ್ಡಿಯಲ್ಲಿ ವ್ಯಾಪಾರ ಮಾಡೊಕ್ಕೆ ಅವಕಾಶ ನೀಡಿರುವ ಸ್ಥಳೀಯ ಆಡಳಿತ ಮತ್ತು ಪೊಲೀಸರು ಇವತ್ತೇ ವ್ಯಾಪಾರ ಕೊನೆ ಮಾಡ್ಬೇಕು ಎಂದು ಆದೇಶ ನೀಡಿದ್ದಾರಂತೆ.ಇಲ್ಲವಾದ್ರೆ ಲಾಠಿ ಚಾರ್ಜ್ ಎತ್ತಂಗಡಿ ಮಾಡಬೇಕಾಗುತ್ತದೆ ಎಂದು ಹೆದರಿಸುತ್ತಿದ್ದಾರೆ ಎನ್ತಾರೆ.ನಾಳೆ ಭಾನುವಾರವಾದ್ದರಿಂದ ಹೆಚ್ಚು ಗ್ರಾಹಕರು ಬರಬಹುದು.ನಾಳೆ ಒಂದ್ ದಿನ ಅವಕಾಶ ಕೊಟ್ಟರೆ ವ್ಯಾಪಾರ ಮುಗಿಸಿಕೊಂಡು ಹೋಗ್ತೇವೆ ಎನ್ತಾರೆ.ಆದರೆ ಅದಕ್ಕೆಅವಕಾಶ ಸಿಗೋ ಸಾಧ್ಯತೆಗಳು ಕ್ಷೀಣ ಎನ್ನಲಾಗ್ತಿದೆ.
ಅದೇನೇ ಆಗಲಿ, ಬಕ್ರಿದ್ ಹಬ್ಬದ ವೇಳೆ ಕುರಿ ವ್ಯಾಪಾರದಲ್ಲಿ ಕಂಡುಬರುತ್ತಿದ್ದ ಉತ್ಸಾಹದ ವಾತಾವರಣ ಈ ಬಾರಿ ಇಲ್ಲವಾಗಿರುವುದು ಮಾತ್ರ ದುರಂತ.