ಬೆಂಗಳೂರು: ಅದು ಜೂನ್ 21 ರ ಸಂಜೆ 3.30 ರ ಸಮಯ.ಬಾಣಸವಾಡಿಯ ಲಿಂಗರಾಜಪುರ ಏರಿಯಾ.ಮಹಿಳೆಯೊಬ್ಬಳು ರಕ್ತದ ಮಡುವಲ್ಲಿ ಬಿದ್ದು ಒದ್ದಾಡ್ತಿದ್ಳು.ಸ್ಥಳೀಯರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ರು.ಆಸ್ಪತ್ರೆಗೆ ಸೇರಿಸಿದ ಪೊಲೀಸರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ರು. ಆ ಮಹಿಳೆಯನ್ನು ರಕ್ತದ ಮಡುವಲ್ಲಿ ಮಲಗಿಸಿದ್ದು ಬೇರಾರು ಅಲ್ಲಾ. ತಾಳಿ ಕಟ್ಟಿದ ಆಕೆಯ ಪತಿಯೇ.ಪತ್ನಿಯ ಮೇಲೆ ಅನುಮಾನ ನೆತ್ತಿಗೇರಿ ಅಟ್ಟಹಾಸ ಮೆರೆದಿದ್ದ.
ಹೀಗೆ ಸ್ಕೂಟರ್ ನಲ್ಲಿ ಮೂವರು ಬರ್ತಾರೆ.ನೋಡ ನೋಡ್ತಿದ್ದಂತೆ ಮಹಿಳೆಯನ್ನ ಕೆಳಗೆ ನೂಕ್ತಾರೆ.ಕ್ಷಣ ಮಾತ್ರದಲ್ಲಿ ಚಾಕುವಿನಿಂದ ಐದಾರು ಬಾರಿ ಚುಚ್ಚಿ ಅಟ್ಟಹಾಸ ಮೆರಿತಾರೆ.ಏನಾಗ್ತಿದೆ ಅಂತಾ ಸ್ಥಳೀಯರು ಬಂದು ನೋಡುವಷ್ಟರಲ್ಲಿ ಎಸ್ಕೇಪ್ ಆಗಿಬಿಡ್ತಾರೆ.ಈ ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳುವಂತಿದೆ.
ಹೌದು..ಹೀಗೆ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಮಹಿಳೆಯ ಹೆಸರು ನಿಖಿತಾ.ಬಾಣಸವಾಡಿಯ ಲಿಂಗರಾಜಪುರ ನಿವಾಸಿ.ಇನ್ನೂ ಹೀಗೆ ಗರುಡಗಂಬದ ರೀತಿ ನಿಂತಿರೊ ವ್ಯಕ್ತಿಯ ಹೆಸರು ದಿವಾಕರ್.ಈತ ಕೂಡ ಬಾಣಸವಾಡಿಯವ್ನು.ಇಬ್ಬರು ಪರಸ್ಪರ ಪ್ರೀತಿ ಮಾಡಿ ಒಂಭತ್ತು ವರ್ಷದ ಹಿಂದೆ ವಿವಾಹವಾಗಿದ್ರು.ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಹೆಂಡತಿ ಮಕ್ಕಳು ಅಂತಾ ಸುಖವಾದ ಸಂಸಾರ ನಡೆಸಬೇಕಾದವ್ನು ಕುಡಿತದ ದಾಸನಾಗಿದ್ದ.ಪ್ರತಿದಿನ ಕುಡಿದು ಬಂದು ರಂಪಾಟ ಮಾಡ್ತಿದ್ದ ಹಾಗಾಗಿಯೇ ಪತ್ನಿ ಪತಿಯಿಂದ ಅಂತರ ಕಾಯ್ದುಕೊಂಡಿದ್ಳು.ಅಷ್ಟೇ ಅಲ್ಲ ದಿವಾಕರ್ ರಿಹ್ಯಾಬ್ಲಿಟೇಷನ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆದು ಬಂದವನಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.ತನ್ನ ಚಿಕ್ಕಪ್ಪನ ಮಗನ ಜೊತೆಗೆ ಲಿಂಗರಾಜಪುರಕ್ಕೆ ಬಂದು ಪತ್ನಿಯನ್ನಕರೆದುಕೊಂಡು ಹೋದವನು ಲಿಂಗರಾಜಪುರ ಸೆಂಟ್ ಜೋಸೆಫ್ ಚರ್ಚ್ ಬಳಿ ರಸ್ತೆ ಮಧ್ಯೆ ಸ್ಕೂಟರ್ ನಿಲ್ಲಿಸಿ ಪತ್ನಿಯನ್ನ ಕೆಳಗೆ ತಳ್ಳಿದ್ದ ಪ್ಲಾನ್ ನಂತೆ ಚಾಕು ತೆಗೆದು ಐದಾರು ಬಾರಿ ಚುಚ್ಚಿ ಅಲ್ಲಿಂದ ಎಸ್ಕೇಪ್ ಆಗಿದ್ದ.ರಕ್ತದ ಮಡುವಲ್ಲಿ ಬಿದ್ದ ಮಹಿಳೆಯನ್ನ ಸ್ಥಳೀಯರು ರಕ್ಷಣೆ ಮಾಡಿ ಆಟೋ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಾಡಹಗಲೇ ನಡು ರಸ್ತೆಯಲ್ಲೇ ಮಹಿಳೆಯನ್ನು ಕೊಲೆಯತ್ನ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ರು. ತಕ್ಷಣ ಮೇಲೆ ಬಾಣಸವಾಡಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಂತೋಷ್ ಗೆ ತಿಳಿಸಿದ್ದಾರೆ.ಮಹಿಳೆಯನ್ನ ಖಾಸಗಿ ಆಸ್ಪತ್ರೆಗೆ ಸೇರಿಸಿದ ಪೊಲೀಸರು ನಂತರ ಅಲ್ಲಿಂದ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ.ಹೆಚ್ವು ರಕ್ತಸ್ರಾವ ಆಗಿದ್ದರಿಂದ ಸಿಬ್ಬಂದಿಗಳೇ ಐದು ಬಾಟಲ್ ರಕ್ತ ದಾನ ಮಾಡಿ ಮಹಿಳೆ ಪ್ರಾಣ ಉಳಿಸಿ ಮಾನವೀಯತೆ ತೋರಿದ್ದಾರೆ.ಸದ್ಯ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಕೇಸ್ ದಾಖಲಾಗಿದ್ದು,ಆರೋಪಿ ದಿವಾಕರ್ ಮತ್ತು ಆತನ ಚಿಕ್ಕಪ್ಪನ ಮಗ ಪ್ರತೀಬ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.ವಿಚಾರಣೆ ವೇಳೆ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದಾಳೆ ಅನ್ನೋ ಕಾರಣಕ್ಕೆ ಕೊಲೆ ಮಾಡಲು ಮುಂದಾಗಿದ್ದೆ ಅಂತಾ ಬಾಯ್ಬಿಟ್ಟಿದ್ದಾನೆ ಆರೋಪಿ ದಿವಾಕರ
ಅದೇನೆ ಹೇಳಿ ಪತ್ನಿ ಮೇಲೆ ಅನುಮಾನ ಇದ್ದರೆ ದೂರವಾಗಲು ಕಾನೂನಿನ ಮೂಲಕ ಸಾಕಷ್ಟು ಮಾರ್ಗಗಳಿವೆ.ಆದ್ರೆ ಕೊಲೆ ಮಾಡಲು ಮುಂದಾಗಿದ್ದು ನಿಜಕ್ಕು ದುರಂತ.ಮಾಡಿದ ತಪ್ಪಿಗೆ ಆರೋಪಿಗಳು ಜೈಲು ಸೇರುವಂತಾಗಿದೆ.