ಚಿಕ್ಕಬಳ್ಳಾಪುರ: ಮಹಿಳೆಯರಿಗೆ ಉಚಿತ ಪ್ರಯಾಣದ ಎಫೆಕ್ಟ್ ಅನ್ನೆ ಬಂಡವಾಳ ಮಾಡಕೊಂಡ ಮಹಿಳೆಯೊಬ್ಬಳು ಬಸ್ ಹತ್ತುವ ವೇಳೆ ಮಾಂಗಲ್ಯ ಚೈನ್ ಕದ್ದು ಸಿಕ್ಕಿಬಿದ್ದು ನಾನವಳಲ್ಲ ನಾನವಳಲ್ಲಾ ಎಂದು ಹೈಡ್ರಾಮ ಸೃಷ್ಟಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಇಂದು ವೀಕೆಂಡ್ ಆಗಿರೋದ್ರಿಂದ ಇಶಾ ಪೌಂಡೇಶನ್ ಗೆ ಹೋಗಲು ಸಾವಿರಾರು ಮಹಿಳೆಯರು ಬಂದಿದ್ದರು. ಬಸ್ ಹತ್ತುವ ವೇಳೆ ನೂಕುನುಗ್ಗಲು ಆಗುವುದನ್ನೇ ಬಂಡವಾಳ ಮಾಡಿಕೊಂಡ ಕಳ್ಳಿ ಸುಮಾರು ಒಂದು ಲಕ್ಷ ಎಪ್ಪತೈದು ಸಾವಿರ ಬೆಲೆ ಬಾಳುವ ಮಾಂಗಲ್ಯ ಚೈನ್ ನನ್ನು ಎಗರಿಸಿದ್ದಾಳೆ ತಕ್ಷಣ ಎಚ್ಚೆತ್ತ ನಾಗಮ್ಮ ಕಳ್ಳಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಜುಟ್ಟು ಹಿಡಿದುಕೊಂಡು ಎಳೆದಾಡಿ ಥಳಿಸಿದ್ದಾಳೆ..
ನಾಗಮ್ಮ ಮಾಲೂರಿನಿಂದ ಚಿಕ್ಕಬಳ್ಳಾಪುರದ ಸಂಭಂದಿಕರ ಮನೆಗೆ ಬಂದಿದ್ದಳು ನಂತರ ಚಿಕ್ಕಬಳ್ಳಾಪುರದಿಂದ ವಾಪಸ್ಸು ಮಾಲೂರಿಗೆ ಹೋಗುವ ವೇಳೆ ಈ ಘಟನೆ ನಡೆದಿದೆ ಇನ್ನೂ ತನ್ನ ಮಾಂಗಲ್ಯ ಚೈನ್ ಕದ್ದ ಆರೋಪಿ ಮೈಸೂರು ಮೂಲದ ಮಂಜುಳಾ ಎಂದು ತಿಳಿದು ಬಂದಿದೆ. ತನ್ನ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಸಿದುಕೊಂಡ ಆರೋಪಿ ಮಂಜುಳಾ ಳ ಜುಟ್ಟು ಹಿಡಿದು ಎಳೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾಳೆ.. ಇತ್ತ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಕಳ್ಳಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.