ಬೆಂಗಳೂರು: ವಯಸ್ಸಾದವರಿಗೆ ದೇವಸ್ಥಾನಗಳಲ್ಲಿ ದೇವರ ದರ್ಶನವನ್ನು ಉಚಿತವಾಗಿ ಕಲ್ಪಿಸುವ ಯೋಜನೆಗೆ ಇಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.ಯೋಜನೆಗೆ ಬಸವನಗುಡಿಯ ದೊಡ್ಡಬಸವಣ್ಣ ದೇವಸ್ಥಾನದಲ್ಲಿ ಚಾಲನೆ ನೀಡಿ, ಹಿರಿಯರು ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆಯೊಕ್ಕೆ ಪಡುತ್ತಿರುವ ಕಷ್ಟ ದೂರ ಮಾಡುವ ಯೋಜನೆಗೆ ಅಗತ್ಯ ಪರಿಷ್ಕರಣೆಯನ್ನು ಶೀಘ್ರವೇ ಮಾಡಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ದೇವಸ್ಥಾನಗಳಲ್ಲಿ ದೇವರ ದರ್ಶನ ಪಡೆಯೊಕ್ಕೆ ಬಂದ್ರೆ ಎಲ್ಲರಂತೆ ಸರದಿಸಾಲಿನಲ್ಲಿ ನಿಲ್ಲಬೇಕು.ವಯಸ್ಸಾಗಿರುವುದರಿಂದ ನಿಲ್ಲೊಕ್ಕೆ ಕಷ್ಟವಾಗ್ತಿದೆ ಎಂದು ವಯೋವೃದ್ದ ಭಕ್ತಾಧಿಗಳು ಮಾಡಿಕೊಂಡ ಮನವಿಗೆ ಕಿವಿಗೊಟ್ಟ ಕಾಂಗ್ರೆಸ್ ಸರ್ಕಾರ ದೇವರ ದರ್ಶನವನ್ನು ಕ್ಯೂ ನಲ್ಲಿ ನಿಲ್ಲದೆ ಸಾವಕಾಶವಾಗಿ ಕಲ್ಪಿಸುವ ನಿರ್ದಾರಕ್ಕೆ ಬಂದ ಹಿನ್ನಲೆಯಲ್ಲಿ ಇಂದು ಯೋಜನೆಗೆ ಚಾಲನೆ ನೀಡಲಾಯಿತು.
ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು,ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಯೋಜನೆ ಜಾರಿಗೊಳಿಸಲಾಗುತ್ತಿದೆ.ಇದರಿಂದ ದೇವಸ್ಥಾನಕ್ಕೆ ಬಂದು ದರ್ಶನ ಸಿಗದೆ ವಾಪಸ್ಸಾಗುತ್ತಿದ್ದ ಎಷ್ಟೋ ಭಕ್ತಾಧಿಗಳ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗುತ್ತದೆ.ಪ್ರತ್ಯೇಕ ಬ್ಯಾರಿಕೇಡ್ ಗಳನ್ನು ಹಾಕಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಸರ್ಕಾರದ ಯೋಜನೆಗೆ ಅಭಿನಂದನೆ ಸಲ್ಲಿಸಿದ ದೇವಸ್ಥಾನದ ಆಡಳಿತ ಮಂಡಳಿಗಳು ಇದರಿಂದ ಬೇಸರದಿಂದ ವಾಪಸ್ಸಾಗುತ್ತಿದ್ದ ಭಕ್ತರು ನೆಮ್ಮದಿಯಿಂದ ವಾಪಸ್ ಆಗುವಂತಾಗಲಿದೆ.ಇದರಿಂದ ಮನೆಯಲ್ಲೇ ಉಳಿದಿರುವ ಎಷ್ಟೋ ಹಿರಿಯರು ದೇವಸ್ಥಾನಗಳಿಗೆ ಬರುವಂತಾಗಲಿದೆ ಎಂದ್ರು.
ಸರ್ಕಾರದ ಯೋಜನೆ ಬಗ್ಗೆ ಖುಷಿ ವ್ಯಕ್ತಪಡಿಸಿದ ಸಾರ್ವಜನಿಕರು ಹಿರಿಯ ಭಕ್ತಾಧಿಗಳು ಬಂದಾಗ ಅವರಿಗೆ ಬೇಕಾದ ರ್ಯಾಂಪ್ ವ್ಯವಸ್ಥೆ ಮಾಡಬೇಕಿದೆ.ಪ್ರತ್ಯೇಕ ಬ್ಯಾರಿಕೇಡ್ ಗಳನ್ನು ಹಾಕಬೇಕಿದೆ.ಸರ್ಕಾರ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದರು.
ಯೋಜನೆ ಜಾರಿಯಿಂದ ವಯಸ್ಸಾದ ಭಕ್ತಾಧಿಗಳು ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರೊಕ್ಕೆ ಅವಕಾಶವಾದಂತಿದೆ.ಆದರೆ ಇದಕ್ಕೆ ಬೇಕಾದ ವ್ಯವಸ್ಥೆಗಳು ಸಿದ್ದವಾಗದ ಹೊರತು ದೇವರ ದರ್ಶನ ಅನಾಯಾಸವಾಗಿ ದೊರೆಯೋದು ಕಷ್ಟವೆನಿಸುತ್ತದೆ.