ಯಾದಗಿರಿ: ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಸ್ವ ಕ್ಷೇತ್ರದಲ್ಲೇ ಇಬ್ಬರು ಗ್ರಾಮ ಪಂಚಾಯತ್ ಸದಸ್ಯೆಯರನ್ನು ಹೈಜಾಕ್ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಆಯ್ಕೆಗೆ ಬಂದ ಹಿನ್ನೆಲೆ ಯಾದಗಿರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲೇ ಹಾಡುಹಗಲೇ ನಗನೂರು ಗ್ರಾಮ ಪಂಚಾಯತಿಯ ಸದಸ್ಯೆಯರಾದ,
ಖಾನಾಪುರ ಗ್ರಾಮದ ನೀಲಗಂಗಮ್ಮ ಹಾಗೂ ಫಾತೀಮಾ ಅವರನ್ನು ಕಿಡ್ನಾಪ್ ಮಾಡಲಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮಹಾಂತಗೌಡ ಪಾಟೀಲ, ಅನಂತರೆಡ್ಡಿ, ಕೆಂಚಗೌಡ್ರ ಹಾಗೂ ಕಾಂಗ್ರೆಸ್ ಮುಖಂಡ ಶರಣಗೌಡ ಕೆಂಚಗೋಳರ ವಿರುದ್ಧ ಕಿಡ್ನಾಪ್ ಆರೋಪ ಕೇಳಿಬಂದಿದೆ. ಇತ್ತ ಇಬ್ಬರು ಸದಸ್ಯೆಯರ ಪತಿಯಂದಿರು ಯಾದಗಿರಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.