ಕಲಬುರಗಿ: ಶಿಕ್ಷಕರು ಮಕ್ಕಳ ನಡುವಣ ಬಾಂಧವ್ಯಕ್ಕೆ ಕಲಬುರಗಿಯ ದಿಕ್ಸಂಗಾ ಸರ್ಕಾರಿ ಶಾಲೆಯಲ್ಲಿ ನೋಡಬಹುದು. ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಸಂಗನ ಬಸಯ್ಯ ದಿಕ್ಸಂಗಾ ದಿಂದ ಚವಡಾಪುರ ತಾಂಡಾಕ್ಕೆ ಶಾಲೆಗೆ ವರ್ಗಾವಣೆಯಾಗಿದ್ದರು.
ತಮ್ಮ ನೆಚ್ಚಿನ ಶಿಕ್ಷಕನನ್ನ ಬಿಡದೇ ವಿದ್ಯಾರ್ಥಿಗಳು ತಬ್ಬಿಕೊಂಡು ಕಣ್ಣೀರಿಟ್ಟ ಘಟನೆ ನಡೆಯಿತು. ಹೌದು ಸರ್ ತಬ್ಬಿಕೊಂಡು ಹೋಗಬೇಡಿ ಸರ್ ಎಂದು ಕಣ್ಣೀರಿಟ್ಟಿದ್ದು, ಮಕ್ಕಳು ಅಳುವುದನ್ನ ನೋಡಿದ ಶಿಕ್ಷಕ ಸಂಗನ ಬಸಯ್ಯ ಕೂಡ ಭಾವುಕರಾದರು. ಸದ್ಯ ಮಕ್ಕಳು ಅಳುತ್ತಿರುವ ವಿಡಿಯೋ ವೈರಲ್ ಆಗಿದೆ.