ರಾಂಚಿ: ಎಲ್ಲೆಲ್ಲಿ ಬಿಜೆಪಿಯೇತರ ಸರ್ಕಾರವಿರುತ್ತದೋ ಅಲ್ಲಿ ಮದ್ಯ ಹಗರಣಗಳು ನಡೆಯುತ್ತಿರು ತ್ತವೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಟೀಕಿಸಿದ್ದಾರೆ. ಜಾರ್ಖಂಡ್ ರಾಜ್ಯದ ಗಿರಿದಿಹ್ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(JP Nadda) ಅವರು ಪಕ್ಷದ “ಸಂಪರ್ಕ್ ಸೇ ಸಮರ್ಥನ್” ಪ್ರಚಾರ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ನರೇಂದ್ರ ಮೋದಿ ಸರ್ಕಾರ ಮಾಡಿರುವ ಸಾಧನೆಗಳನ್ನು ಉಲ್ಲೇಖಿಸಿ,
ಇಂದು ಭಾರತ ಮಾತನಾಡುವಾಗ ಜಗತ್ತು ಕೇಳಿಸಿಕೊಳ್ಳುತ್ತಿರುವುದು ನಿಜವಾಗಿಯೂ ಸಂತೋಷವಾಗಿದೆ ಎಂದು ಹೇಳಿದರು. ಕೆಲವು ರಾಜ್ಯ ಸರ್ಕಾರಗಳೊಂದಿಗೆ ಲಿಕ್ಕರ್ ನ ಸಂಬಂಧ ಏನು ಎಂಬುದೇ ಅರ್ಥವಾಗುವುದಿಲ್ಲ. ಬಿಜೆಪಿಯೇತರ ಸರ್ಕಾರ ಇರುವಲ್ಲೆಲ್ಲಾ ಮದ್ಯದ ಹಗರಣಗಳು ನಡೆಯುತ್ತವೆ. ಅದೇ ರೀತಿ ಅಕ್ರಮ ಗಣಿಗಾರಿಕೆ ಮತ್ತು ಹೇಮಂತ್ ಸೊರೆನ್ ಅವರ ಕೃಪಾಕಟಾಕ್ಷ ಜಾರ್ಖಂಡ್ನಲ್ಲಿ ಪರಸ್ಪರ ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿವೆ ಎಂದು ಸಹ ಹೇಳಿದರು.