ದಾವಣಗೆರೆ: ಮುಸ್ಲಿಮರ ಓಲೈಕೆಗೆ ಸರ್ಕಾರ ಕೆಲವು ನಿರ್ಧಾರ ತೆಗೆದುಕೊಳ್ತಿದೆ. ಇದರ ಪ್ರತೀಕವಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಆಗಿದೆ ಎಂದು ದಾವಣಗೆರೆ ನಗರದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದ್ದಾರೆ. ಯಾವುದೇ ಶಿಕ್ಷಣ ತಜ್ಞರನ್ನು ಕೇಳದೆ ಶಾಲಾ ಪಠ್ಯ ಪರಿಷ್ಕರಣೆ ಮಾಡಲಾಗುತ್ತಿದೆ. ನೇರವಾಗಿ ಸಿಎಂ ಮನೆಯಿಂದ ಸಂಪುಟಕ್ಕೆ ಪುಸ್ತಕ ಹೋಗಿದೆ.
ಆರ್ಎಸ್ಎಸ್ ಹೆಡ್ಗೇವಾರ್ ಸಂಸ್ಥಾಪಕ ಭಾಷಣ ತೆಗೆದಿದ್ದಾರೆ. PhD ಓದಿದ ಸಚಿವ ಪ್ರಿಯಾಂಕ್ ಯಾಕೆ ಓದಬೇಕು ಅಂತಿದ್ದಾರೆ. ಚಕ್ರವರ್ತಿ ಸೂಲೆಬೆಲೆ ಶಿಕ್ಷಣ ಪಂಡಿತರಲ್ಲ ಅಂತಾ ಹೇಳುತ್ತಿದ್ದಾರೆ. ಯಾವ ಪಂಡಿತರ ಸಲಹೆ ಪಡೆದು ಪಠ್ಯ ಬದಲಾವಣೆ ಮಾಡಿದ್ದಾರೆ ಎಂದು ದಾವಣಗೆರೆ ನಗರದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ವಾಗ್ದಾಳಿ ನಡೆಸಿದ್ದಾರೆ.