ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕೃಷ್ಣಾಮೃಗ ಎಂಬ ಪ್ರಾಣಿಗೆ ಕಾಲಿಗೆ ಪೆಟ್ಟಾಗಿ ನರಲಾಟ ಒಳಪಟ್ಟಿದ್ದು ಹಿನ್ನೆಲೆಯಲ್ಲಿ ಇಂದು ಅದಕ್ಕೆ ಶಸ್ತ್ರ ಚಿಕಿತ್ಸೆ ನೀಡಿ ವಿಶೇಷ ಹಾರೈಕೆಯನ್ನು ಮಾಡಲಾಗಿದೆ ಎಂದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಉಮಾಶಂಕರ್ ಮಾಹಿತಿ ನೀಡಿದರು. ಹೌದು ಬೆಂಗಳೂರು ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕೃಷ್ಣಾಮೃಗ ಪಾರ್ಕ್ ನಲ್ಲಿ ಗುಂಪು ಇರುವಾಗ ಕಳೆದ ಎರಡು ದಿನಗಳ ಹಿಂದೆ ಎರಡು ಕೃಷ್ಣಾಮೃಗ ಗಳು ಕಿತ್ತಾಟ ಮಾಡಿಕೊಂಡಿವೆ.
ಹಾ ವೇಳೆ ಕೃಷ್ಣಾಮೃಗ ಒಂದಕ್ಕೆ ಕಾಲು ಮುರಿದು ಒಂದೇ ಜಾಗದಲ್ಲಿ ಕುಳಿತು ನರಲಾಟ ಅನುಭವಿಸುತ್ತಿತ್ತು ಇದನ್ನು ಕಂಡ ಪ್ರಾಣಿ ಪಾಲಕ ಗಮನಿಸಿ ವೈದ್ಯರಿಗೆ ಮಾಹಿತಿ ನೀಡಿ ಅದನ್ನು ಲ್ಯಾಬ್ ಗೆ ಕರೆತಂದು ಅದಕ್ಕೆ ಇಂದು ಶಸ್ತ್ರ ಚಿಕಿತ್ಸೆ ಮಾಡಿ ವಿಶೇಷ ಹಾರೈಕೆ ಮಾಡಲಾಗಿದೆ ಎಂದು ಡಾಕ್ಟರ್ ಉಮಾ ಶಂಕರ್ ಮಾಹಿತಿ ನೀಡಿದರು ಇನ್ನು ಕಾಲಿನ ಮೂಳೆ ಮುರಿದುಕೊಂಡಿದ್ದ ಕೃಷ್ಣಾಮೃಗ ಶಸ್ತ್ರ ಚಿಕಿತ್ಸೆಯಲ್ಲಿ ಉಮಾಶಂಕರ್ ವಿಜಯದಿಂದ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.