ಬೆಂಗಳೂರು : ಗೃಹ ಜ್ಯೋತಿ,ಗೃಹ ಲಕ್ಷ್ಮೀ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅರ್ಜಿದಾರರಿಂದ ಹಣ ವಸೂಲಿ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ” ಭ್ರಷ್ಟಾಚಾರ ರಹಿತ ಯೋಜನೆ ಅನುಷ್ಠಾನ ಮಾಡ್ತೇವೆ. ಅರ್ಜಿ ಸಲ್ಲಿಕೆ ಉಚಿತವಾಗಿ ಮಾಡಿಕೊಡಬೇಕು. ಯಾರಾದರೂ ಸಂಘ ಸಂಸ್ಥೆಗಳು ಹಣ ವಸೂಲಿ ಮಾಡಿದ್ರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ” ಎಂದು ಎಚ್ಚರಿಕೆ ನೀಡಿದರು.
200 -500 ರೂಪಾಯಿ ವಸೂಲಿ
ಈಗಾಗಲೇ 200 ರಿಂದ 500 ರೂಪಾಯಿ ಹಣ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಅದು ಗೊತ್ತಾದ್ರೆ ಅವರ ಏಜೆನ್ಸಿ ಕೂಡ ಕ್ಯಾನ್ಸಲ್ ಮಾಡ್ತೀವಿ. ಈ ಸ್ಕೀಮ್ಗಳಲ್ಲಿ ಯಾರು ಕೂಡ ಒಬ್ಬರಿಗೆ ಲಂಚ ಕೊಡಬಾರದು ಎಂದು ಮನವಿ ಮಾಡಿದರು.
ಸಹಾಯವಾಣಿ ಆರಂಭ
ಯೋಜನೆ ಪಡೆದುಕೊಳ್ಳಲು ಯಾರಾದರೂ ಲಂಚ ಕೇಳಿದರೆ ಅಥವಾ ಕೊಟ್ಟರೆ ನಾವು ಒಂದು ಸಹಾಯವಾಣಿ ( ಹೆಲ್ಪ್ ಲೈನ್) ನಂಬರ್ ಕೊಡ್ತೀವಿ. ಅದಕ್ಕೆ ಕಾಲ್ ಮಾಡಿ ದೂರು ಕೊಡಿ ಎಂದು ಡಿಕೆ ಶಿವಕುಮಾರ್ ಹೇಳಿದರು.