ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಬಿಬಿಎಂಪಿ ಸರ್ವೆಗೆ ಯೋಜಿಸಿದ್ದು ಡ್ರೋನ್ ಬಳಕೆಗೆ ಮುಂದಾಗಿದೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಇತ್ತೀಚೆಗೆ ಡ್ರೋನ್ ಮೊರೆ ಹೋಗಿತ್ತು. ಇದೀಗ ಬಿಬಿಎಂಪಿ ಡ್ರೋನ್ ತಂತ್ರಜ್ಞಾನದ ಮೂಲಕ ನಾಯಿಗಳ ಗಣತಿ ಮಾಡಲು ಸಜ್ಜಾಗಿದೆ. ನಾಲ್ಕು ವರ್ಷ ನಂತರ ಬೀದಿ ನಾಯಿ ಗಣತಿಗೆ ಬಿಬಿಎಂಪಿ ಮುಂದಾಗಿದ್ದು, ಇದೀಗ ಜುಲೈ 1ರಿಂದ ಗಣತಿ ನಡೆಯಲಿದೆ.
ಈ ಹಿಂದೆ 2019ರಲ್ಲಿ ನಡೆದ ಗಣತಿಯಲ್ಲಿ ಸುಮಾರು ಮೂರು ಲಕ್ಷ ಬೀದಿ ನಾಯಿಗಳು ಇರುವುದು ಪಾಲಿಕೆ ಗುರುತಿಸಿತ್ತು. ಈಗ ಪಾಲಿಕೆ ವ್ಯಾಪ್ತಿಯಲ್ಲಿ ಸಂತಾನ ಹರಣ ಚಿಕಿತ್ಸೆ ಬಳಿಕ ಎಷ್ಟು ನಾಯಿಗಳಿವೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಹೀಗಾಗಿ ನಾಯಿಗಳ ನಿಯಂತ್ರಣ ಹೇಗೆ ಮಾಡಬೇಕಾದರೆ ಗಣತಿ ಅವಶ್ಯವಾಗಿದೆ.