ಬೆಂಗಳೂರು: ರಾಜಭವನಕ್ಕೆ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಮತಾಂತರ ನಿಷೇಧ ಕಾಯ್ದೆ..ಗೋಹತ್ಯೆ ನಿಷೇಧ ಕಾಯ್ದೆ ರದ್ದತಿ ವಿಚಾರ ಬಗ್ಗೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ .
ಆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು1984 ರಲ್ಲಿಯೇ ಕಾಂಗ್ರೆಸ್ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತುಬಿಜೆಪಿ ಅದನ್ನ ಕೆಲ ಬದಲಾವಣೆ ಮಾಡಿತ್ತು ಅಷ್ಟೇ ನೀವೇ ಕಾಯ್ದೆ ಮಾಡಿ, ಈಗ ವಿರೋಧ ಮಾಡ್ತಿರೋದು ಸರಿನಾ.?ರೈತರಿಗೆ ಅನ್ಯಾಯ ಮಾಡುವ ಕೆಲ್ಸ ಮಾಡ್ತಿದ್ದಿರಾ ಅಂತ ಆಕ್ರೋಶ.
ಸೋನಿಯಾ ಗಾಂಧಿ ಒಲೈಸೋಕೆ ಈ ರೀತಿ ಮಾಡ್ತಾ ಇದ್ದೀರಾ.?ಮುಸ್ಲಿಂ ಓಲೈಕೆ ಮಾಡೋದೇ ಕಾಂಗ್ರೆಸ್ ನ ಕಾಯಕವಾಗಿದೆ ಬಿಜೆಪಿ ಮಾಡಿದ ತಪ್ಪಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಪಠ್ಯದಲ್ಲಿ ಸ್ವತಂತ್ರ್ಯ ಹೋರಾಟಗಾರರ ಪಠ್ಯ ತೆಗೆದಿರೋದು ಸರಿಯಲ್ಲಅಧಿವೇಶನದಲ್ಲಿ ಸರ್ಕಾರ ಯಾವ ನಿಲುವು ಕೈಗೊಳ್ಳೊತ್ತೋ ಕಾದು ನೋಡೋಣಾ
ಒಂದು ವೇಳೆ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದ್ರೆ ರಾಜ್ಯಾದ್ಯಂತ ಹೋರಾಟ ಅಧಿವೇಶನದಲ್ಲಿ ಒಪ್ಪಿಗೆ ಪಡೆದ್ರೆ ಅಂತಿಮ ಅಂಕಿತ ಹಾಕೋದು ರಾಜ್ಯಪಾಲರು ಹೀಗಾಗಿ ರಾಜ್ಯಪಾಲರಿಗೆ ಮನವಿ ಮಾಡಲು ಬಂದಿದ್ದೇನೆ.
ದೇಶದ್ರೋಹಿಗಳ, ದೇಶದ ಮೇಲೆ ದಾಳಿ ಮಾಡಿದವರ ಪಠ್ಯವನ್ನ ಮಕ್ಕಳು ಓದಬೇಕಾ.? ಸಾರ್ವರ್ಕರ್ ಒಬ್ಬ ದೇಶ ಪ್ರೇಮಿ, ಕ್ರಾಂತಿಕಾರಿ ಕಾಂಗ್ರೆಸ್ ಗೆ ಚರಕ ತಿರುಗಿಸೋ ಗಾಂಧೀಜಿ ಬೇಕೆ ಹೊರತು ಕ್ರಾಂತಿಕಾರಿಗಳು ಬೇಡ ಪಠ್ಯ ಸೇರಿಸೋಕೆ ಪಿಹೆಚ್ ಡಿ ನೇ ಮಾಡಬೇಕು ಅಂತ ಏನಿಲ್ಲ ನಾಸ್ತಿಕ ವಿಚಾರಧಾರೆ ಇರುವವರು ಬರಗೂರು ರಾಮಚಂದ್ರಪ್ಪ ಕಮ್ಯೂನಿಸ್ಟ್, ಇಸ್ಲಾಮಿನ ವಿಚಾರಧಾರೆಗಳನ್ನ ಪ್ರಚಾರ ಮಾಡೋದು ಬೇಡ ಎಂದು ಹೇಳಿದರು.
ಶಿವಮೊಗ್ಗದಲ್ಲಿ ತಡರಾತ್ರಿ ಹಿಂಸಾಚಾರ ನಡೆದ ವಿಚಾರ ಬಗ್ಗೆ ಮಾತನಾಡಿದ ಅವರು ಶಿವಮೊಗ್ಗ ಬಿಜೆಪಿ ಭದ್ರಕೋಟೆ ಹೀಗಾಗಿ ಇಂಥ ಘಟನೆ ನಡೆದಿದೆ. ಬಿಜೆಪಿ ಶಿವಮೊಗ್ಗದಲ್ಲಿದ್ದ ಕಿಡಿಗೇಡಿಗಳು, ಪಿಎಫ್ಐ ಅನ್ನ ಯಾಕೆ ಕಂಟ್ರೋಲ್ ಮಾಡ್ಲಿಲ್ಲ.? ಜಿಲ್ಲೆಯವರೇ ಹೋಂ ಮಿನಿಸ್ಟರ್ ಇದ್ರಲ್ವಾ ಯಾಕೆ ಕಂಟ್ರೋಲ್ ಮಾಡ್ಲಿಲ್ಲ.?ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿನೇ ನೇರ ಹೊಣೆ ಕಾಂಗ್ರೆಸ್ ಬಂದ ಮೇಲೆ ಇದು ಇನ್ನಷ್ಟು ಹೆಚ್ಚಳವಾಗುತ್ತೆ ಎಂದು ಕಾಂಗ್ರೆಸ್ ಬಿಜೆಪಿ ಎರಡು ಪಕ್ಷಗಳ ನಡುವೆ ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಸೋತ ನಂತರ ನಾನು ಆಕ್ಟಿವ್ ಆಗಿಯೇ ಇದ್ದೇನೆ ನನ್ನ ಹೋರಾಟ ನಿರಂತರವಾಗಿ ನಡೀತಾ ಇದೆ ಕೊನೆ ಉಸಿರು ಇರೋವರೆಗೂ ಹಿಂದುತ್ವದ ಪರವಾದ ಹೋರಾಟ ಇದ್ದೇ ಇರುತ್ತೆ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು