ಬೆಂಗಳೂರು: ರಾಜ್ಯದಲ್ಲಿ ಯಾವುದೇ ಅನಧಿಕೃತ ಲೋಡ್ ಶೆಡ್ಡಿಂಗ್ ಇಲ್ಲ. ನನಗೆ ಗೊತ್ತಿರುವ ಹಾಗೆ ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ. ಪರೀಕ್ಷೆ ಹಾಗೂ ಚುನಾವಣೆ ವೇಳೆ ಲೋಡ್ ಶೆಡ್ಡಿಂಗ್ ಮಾಡಿಲ್ಲ. ಈಗ ಮೈಂಟೇನೆನ್ಸ್ಗಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಕರೆಂಟ್ ಶಾರ್ಟೇಜ್ ಆಗಿ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ.
ಈ ವೇಳೆ ಜೆಸ್ಕಾಂ ಇಂಜಿನಿಯರ್ ಅವರಿಗೆ ಸಚಿವ ಕೆ.ಜೆ.ಜಾರ್ಜ್ ತರಾಟೆಗೆ ತೆಗೆದುಕೊಂಡಿದ್ದಾರೆ. ನಾನೇನು ಹೊಸದಾಗಿ ಮಂತ್ರಿಯಾಗಿಲ್ಲ. ನಿಮ್ಮ ಕೈಲಾಗದೆ ಇದ್ದರೇ ಹೆಡ್ ಆಫೀಸ್ಗೆ ಹೇಳಿ ಅಂತ ಕೆ.ಜೆ.ಜಾರ್ಜ್ ಗರಂ ಆಗಿದ್ದಾರೆ.