ಬೆಂಗಳೂರು: ಬೆಲೆ ಏರಿಕೆ ಬಗ್ಗೆ ನೋಡಿದ್ರೆ ಶಾಕ್ ಆಗ್ತಿದೆ.ಅಕ್ಕಿ, ಹಾಲು , ವಿದ್ಯುತ್ ಹೀಗೆ ಒಂದರ ಮೇಲೊಂದು ಬೆಲೆ ಏರುತ್ತಲೇ ಹೋಗ್ತಿದ್ರೆ ಜನಸಾಮಾನ್ಯರ ಗತಿ ಏನು? ಈಗ ನೋಡಿದ್ರೆ ಟೊಮ್ಯಾಟೋ ಬೆಲೆ 100 ರೂ. ತಲುಪಿದೆ. ಈ ಬೆಲೆ ಏರಿಕೆಯಿಂದಾಗಿ ಅತ್ತ ರೈತನಿಗೂ ಲಾಭ ಇಲ್ಲ, ಇತ್ತ ಗ್ರಾಹಕನಿಗೂ ಲಾಭವಿಲ್ಲ. ಜನ ಬೆಲೆ ಬೆಂಕಿಯಲ್ಲಿ ಬೇಯುತ್ತಿದ್ದರೆ ಈ ಸರ್ಕಾರ ಆ ಬೇಗೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.
ಸೊಪ್ಪು ತರಕಾರಿ ಸೇರಿದಂತೆ ಆಹಾರ ಪದಾರ್ಥಗಳ ವಸ್ತುಗಳ ಮೇಲಿನ ಬೆಲೆ ಏರಿಕೆಯು ಜನ ಸಾಮ್ಯಾನರಿಗೆ ಶಾಕ್ ಕೊಟ್ಟಂತಾಗಿದೆ. ಈ ಕುರಿತು ಮಾಜಿ ಸಿಎಂ ಹೆಚ್ಡಿಕೆ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.