ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ತಮ್ಮ ಕಂಪನಿ ಬೆಂಬಲಿಸುತ್ತದೆ ಮತ್ತು ದೇಶದ ವಾಣಿಜ್ಯ ವಿಮಾನಯಾನ ಮಾರುಕಟ್ಟೆಯ ತ್ವರಿತ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಬೋಯಿಂಗ್ ವಿಮಾನ ಸಂಸ್ಥೆಯ ಸಿಇಒ ಡೇವಿಡ್ ಎಲ್ ಕ್ಯಾಲ್ಹೌನ್ ತಿಳಿಸಿದ್ದಾರೆ.
ಮೋದಿ ಅಮೆರಿಕಾಗೆ ಭೇಟಿ ನೀಡಿದ್ದ ವೇಳೆ ಅವನ್ನು ಭೇಟಿಯಾದ ಡೇವಿಡ್, ಎಂಟು ದಶಕಗಳ ಏರೋಸ್ಪೇಷ್ ಪಾಲುದಾರಿಕೆ ಕುರಿತಂತೆ ಮಹತ್ವದ ಚರ್ಚಿಸಿದ್ದರು. ಭಾರತದ ವಾಣಿಜ್ಯ ವಾಯುಯಾನ ಮಾರುಕಟ್ಟೆಯ ಕ್ಷಿಪ್ರ ವಿಸ್ತರಣೆಯಲ್ಲಿ ಮತ್ತು ರಾಷ್ಟ್ರದ ರಕ್ಷಣಾ ಪಡೆಗಳ ಮಿಷನ್ ಸಿದ್ಧತೆ ಮತ್ತು ಆಧುನೀಕರಣದಲ್ಲಿ ಪ್ರಮುಖ ಪಾತ್ರ ವಹಿಸಲು ಬೋಯಿಂಗ್ ಹೆಮ್ಮೆಪಡುತ್ತದೆ ಎಂದರು.
ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ನಾವು ಬೆಂಬಲಿಸುತ್ತೇವೆ, ಭಾರತದಲ್ಲಿ 5,000 ಕ್ಕೂ ಹೆಚ್ಚು ಜನರು ಬೋಯಿಂಗ್ ತಂಡದಲ್ಲಿ ನವೀನ ಕೆಲಸಗಳನ್ನು ಮಾಡುತ್ತಿರುವ ಉನ್ನತ-ಗುಣಮಟ್ಟದ ವೃತ್ತಿಜೀವನವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ಭಾರತದಲ್ಲಿ ಬೋಯಿಂಗ್ನ ಬೆಳೆಯುತ್ತಿರುವ ಹೂಡಿಕೆಗಳು ದೇಶದೊಂದಿಗಿನ ಕಂಪನಿಯ ಪಾಲುದಾರಿಕೆಯ ಬಲವನ್ನು ಮಾತ್ರವಲ್ಲದೆ ವಿಶಾಲವಾದ ಅಮೆರಿಕ-ಭಾರತದ ಆರ್ಥಿಕ ಸಂಬಂಧದ ಧನಾತ್ಮಕ ಪಥವನ್ನು ಒತ್ತಿಹೇಳುತ್ತದೆ ಎಂದು ಮೆಚ್ಚುಗೆ ಸೂಚಿಸಿದರು.