ಉಡುಪಿ: ಜನರ ಸಮಸ್ಯೆಗಳನ್ನ ಬಗೆಹರಿಸಬೇಕಾದ ನಗರಸಭೆ ಸದಸ್ಯರೇ ಮೋಜು ಮಸ್ತಿಯಲ್ಲಿ ತೊಡಗಿದ್ದು, ಘಣತ್ಯಾಜ್ಯ ನಿರ್ವಹಣೆ ಘಟಕ ವೀಕ್ಷಣೆ ಹೆಸರಲ್ಲಿ ಗದಗ ಬೆಟಗೇರಿ ನಗರಸಭೆ ಸದಸ್ಯರು ಭರ್ಜರಿ ಟ್ರಿಪ್ ಕೈಗೊಂಡಿದ್ದಾರೆ. ಎರಡು ದಿನಗಳಿಂದ ಉಡುಪಿಯಲ್ಲಿ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಜೊತೆಗೆ ಮೋಜು ಮಸ್ತಿಗೆ ತಮ್ಮ ಪತಿಗಳನ್ನೂ ಮಹಿಳಾ ಸದಸ್ಯರು ಕರೆದುಕೊಂಡು ಹೋಗಿದ್ದಾರೆ.
ಸುಮಾರು 18 ಜನ ಸದಸ್ಯರು ಹಾಗೂ 10 ಜನ ಅಧಿಕಾರಿಗಳ ತಂಡ ಭೇಟಿ ಪ್ರವಾಸ ಕೈಗೊಂಡಿದ್ದು, ಇವರ ಜೊತೆಗೆ ಕೆಲವು ಮಹಿಳಾ ಸದಸ್ಯರ ಗಂಡಂದಿರು ಬಂದಿದ್ದರು. ಯಾವುದಾದರೂ ಸಮಸ್ಯೆ ಹೇಳಿಕೊಂಡು ಬಗೆಹರಿಸಲು ಕೇಳಿದರೆ ಅನುದಾನದ ನೆಪ ಹೇಳುವ ಇವರು ಮೋಜು ಮಸ್ತಿ ಮಾಡುತ್ತಿರುವುದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋಜುಮಸ್ತಿ ಫೋಟೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಬಾರಿ ಟೀಕೆ ಕೂಡ ಎದುರಾಗಿದೆ.