ಮಂಗಳೂರು: ನಮಗೆ ಮೀನು ಎಂದರೆ ಮೊದಲು ನೆನಪಾಗೋದು ಮಂಗಳೂರು. ಇಲ್ಲಿ ವಿಧ ವಿಧ ರೀತಿಯ ಮೀನುಗಳು ದೇಶ ವಿದೇಶಕ್ಕೆ ರಫ್ತು ಆಗುತ್ತವೆ. ಈ ಸಲ ಮಳೆಯ ಅಭಾವ ಹಿನ್ನೆಲೆಯಾದ್ರೂ ಮೀನುಗಾರರಿಗೆ ಮಾತ್ರ ಸಂಕಟವೇನು ಆಗಿಲ್ಲ ಯಾಕೆಂದರೆ ಮಳೆ ಜಾಸ್ತಿಯಾದರೆ ಮೀನುಗಾರರು ಸಮುದ್ರಕ್ಕೆ ಇಳಿಯುವಂತಿಲ್ಲ ಆದರೆ ಮಳೆ ಕಮ್ಮಿಯಾದ್ದರಿಂದ ಮೀನುಗಾರರ ಮೊಗದಲ್ಲಿ ಸಂತಸವನ್ನು ನಾವು ಕಾಣಬಹುದು.
ಮಂಗಳೂರು ಮೀನುಗಾರಿಕೆ ದಕ್ಕೆಗೆ ಬೆಳ್ಳಂಬೆಳಗ್ಗೆ ಸ್ಥಳೀಯವಾಗಿ ದೋಣಿಯಲ್ಲಿ ಗಾಳ ಹಾಕಿ ಹಿಡಿದ ದೊಡ್ಡ ಅಂಜಲ್ ಮೀನು, ಪಕ್ಕದ ಮಲ್ಪೆ ಅಲ್ಲದೆ, ಕಾರವಾರ, ರತ್ನಗಿರಿ, ಆಂಧ್ರಪ್ರದೇಶ ಮತ್ತು ಚೆನ್ನೈಯಿಂದಲೂ ತಾಜಾ ಮೀನು ಬರುತ್ತಿದೆ. ಫ್ರೋಝನ್ ಮೀನು ಕೂಡ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದೆ.
ಮಂಗಳೂರು ಮೀನುಗಾರಿಕೆ ದಕ್ಕೆಗೆ ಪ್ರತಿದಿನ ಬೆಳಗ್ಗೆ 7 ಗಂಟೆ ವೇಳೆ ಅಳಿವೆ ಬಾಗಿಲು ಬಳಿ ಬೋಟ್ ಮೂಲಕ ಬಲೆ ಹಾಕಿ ಹಿಡಿದು ತರುವ ತಾಜಾ ಕಾನೆ ಮೀನು ಬರುತ್ತಿದೆ. ಮಳೆಗಾಲದಲ್ಲಿ ಹೆಚ್ಚು ಕಾನೆ ಸಿಗುತ್ತಿದೆ. 5-6 ಮಂದಿ ಏಲಂ ಮಾಡುತ್ತಿದ್ದು, ಕೆಜಿಗೆ 600- 700 ರೂ.ಗೆ ಮಾರಾಟವಾಗುತ್ತಿದೆ. ದೊಡ್ಡ ಗಾತ್ರದ್ದಾದರೆ ಸಾವಿರ ರೂ. ತನಕ ಇರುತ್ತದೆ. ನದಿಯ ಕೇವಜ್, ಏರಿ, ಪಯ್ಯ ಮತ್ತಿತರ ಮೀನನ್ನು ಜನ ಖರೀದಿಸುತ್ತಾರೆ. ಮೀನುಗಾರ ಮಹಿಳೆಯರು ಇಲ್ಲಿ ಖರೀದಿಸಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಚಿಪ್ಪು ಮೀನು ಮರುವಾಯಿ ಕೂಡ ಸಾಕಷ್ಟು ಮಾರಾಟವಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಪಣಂಬೂರಿನಲ್ಲಿ ನಾಡದೋಣಿ ಮೀನುಗಾರಿಕೆ ಆರಂಭಗೊಳ್ಳಲಿದೆ.
ಮಂಗಳೂರಿನಲ್ಲಿ ಮಳೆಗಾಲದಲ್ಲೂ ಮೀನಿಗೆ ಬರವಿಲ್ಲ. ಇಲ್ಲಿಯ ಜನರಿಗೆ ಮೀನು ಬೇಕೇ ಬೇಕು. ಹಾಗಾಗಿ ಮಲ್ಪೆ, ಅಂಕೋಲಾ, ದೂರದ ಚೆನ್ನೈಯಿಂದ ಮೀನು ತರಿಸಲಾಗುತ್ತದೆ. ಹೋಟೆಲ್ಗಳಿಗೆ ಹೆಚ್ಚು ಬೇಡಿಕೆ ಇದೆ