ಧಾರವಾಡ ;- ಭೂಪರಿವರ್ತನೆಗೆ ಎರಡು ಎಕರೆ ಜಮೀನು ಇದ್ದರೆ ಅವಕಾಶ ನೀಡುತ್ತೇವೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಹಾರ ಉದ್ಯಮ ಬೆಳೆಯಲು ಪ್ರೋತ್ಸಾಹ ನೀಡುತ್ತೇವೆ. ಭೂಪರಿವರ್ತನೆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಎರಡು ಎಕರೆ ಜಮೀನು ಇದ್ದರೆ ಪರಿವರ್ತನೆ ಮಾಡಲು ಅವಕಾಶ ಕೊಡುತ್ತೇವೆ. ಫುಡ್ ಇಂಡಸ್ಟ್ರಿ ಮಾಡುವವರಿದ್ದರೆ ಮಾಡಬಹುದು. ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಆಹಾರ ಉದ್ಯಮ ಬೆಳೆಸಲು ಪ್ರೋತ್ಸಾಹ ನೀಡುತ್ತೇವೆ. ಧಾರವಾಡದಲ್ಲಿ ಮಾವಿನ ಹಣ್ಣಿನ ಜೊತೆಗೆ ಬೇರೆ ಬೇರೆ ರೀತಿಯ ರಸ ತೆಗೆಯುತಿದ್ದಾರೆ. ಇದು ವಿದೇಶಕ್ಕೆ ರಫ್ತಾಗುತ್ತಿದೆ. ಮಾವಿನ ಮಾರುಕಟ್ಟೆ ಬೆಲೆ ಕುಸಿತ ಅದಾಗ ಫುಡ್ ಪ್ರೊಸೆಸ್ ಮಾಡಬಹುದು. ಇದರಿಂದ ಬೆಳೆಗಾರರಿಗೆ ಬೆಂಬಲ ಸಿಗಲಿದೆ ಎಂದು ಹೇಳಿದ್ದಾರೆ.