ಇಸ್ಲಾಮಾಬಾದ್: ಆರ್ಥಿಕ ಪರಿಸ್ಥಿತಿಯಿಂದ ಪರಿತಪಿಸುತ್ತಿರುವ ಪಾಕಿಸ್ತಾನ ಜನತೆಗೆ ಇದೀಗ ಹವಾಮಾನ ಕೂಡ ತಲೆ ನೋವಾಗಿದೆ. ಇದೀಗ ವಿಪರೀತ ಬಿಸಿಲಿನ ಕಾರಣದಿಂದಾಗಿ ಇಸ್ಲಾಮಾಬಾದ್ ಮತ್ತು ಮರ್ದಾನ್ನಲ್ಲಿ 22 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮರ್ದಾನ್ ಮೆಡಿಕಲ್ ಕಾಂಪ್ಲೆಕ್ಸ್ ಮುಖ್ಯಸ್ಥ ಡಾ.ತಾರಿಕ್ ಮೆಹಮೂದ್, ಜೂನ್ 24ರಂದು ನಗರದಲ್ಲಿ 18 ಮಂದಿ ಬಿಸಿಲ ಬೇಗೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಎಂದು ತಿಳಿಸಿದ್ದಾರೆ.
ಹಲವಾರು ನಗರಗಳಲ್ಲಿ ಅಘೋಷಿತ ವಿದ್ಯುತ್ ಲೋಡ್ ಶೆಡ್ಡಿಂಗ್ನಿಂದಾಗಿ ಜನಸಾಮಾನ್ಯರ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗಿದೆ. ಇದಲ್ಲದೆ, ಫೆಡರಲ್ ರಾಜಧಾನಿಯಲ್ಲಿ ನಾಲ್ಕು ಜನರು ಬಿಸಿಲ ಶಾಖದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.