ಮಲೆನಾಡಿನ ಜಲಾಶಯಗಳ ಒಡಲು ತುಂಬಿದರೆ ಬಯಲು ಸೀಮೆ ಶ್ರೀಮಂತವಾಗುತ್ತದೆ.ಪಶ್ಚಿಮಘಟ್ಟ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿದರೆ ಬಯಲು ಸೀಮೆ ಸಮೃದ್ಧವಾಗುತ್ತದೆ.ಜಲಾಶಯಗಳ ಆಗರವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗನಮಕ್ಕಿ, ತುಂಗಾ, ಭದ್ರಾ, ಮಾಣಿ, ಚಕ್ರ ಸಾವೆಹಕ್ಲು ಜಲಾಶಯಗಳು ವರ್ಷಪೂರ್ತಿ ಮೈದುಂಬಿ ಹರಿಯುತ್ತವೆ.ಆದರೆ ಈ ಬಾರಿ ರಾಜ್ಯದ ಬಹುತೇಕ ಜಲಾಶಯಗಳ ಒಡಲು ಬರಿದಂತೆ ಜಿಲ್ಲೆಯ ಜಲಾಶಯಗಳು ಬತ್ತಿ ಹೋಗಿದೆ. ಶರಾವತಿ ಕಣಿವೆ ಪ್ರದೇಶದಲ್ಲಿ ನೆನ್ವೆಯಿಂದ ಮಳೆ ಸುರಿಯುತ್ತಿದ್ದರೂ ಅದು ಡ್ಯಾಂ ಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.
151.64 ಟಿಎಂಸಿ ಸಾಮರ್ಥ್ಯವಿರುವ ಲಿಂಗನಮಕ್ಕಿ ಜಲಾಶಯದಲೇಲ್ ಇಂದಿಗೆ 18.69 ಟಿಎಂಸಿ ನೀರು ಸಂಗ್ರಹಗೊಂಡಿದೆ. ಗರಿಷ್ಠ 1819 ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಡ್ಯಾಂ ನಲ್ಲಿ 1740.40 ಅಡಿ ನೀರು ಸಂಗ್ರಹಗೊಂಡಿದೆ. ಜಲಾಶಯಕ್ಕೆ 2559 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಣಿವೆ ಪ್ರದೇಶದ ವ್ಯಾಪ್ತಿಯಲ್ಲಿ 38.2 ಮಿಲಿಮೀಟರ್ ಮಳೆಯಾಗಿದೆ. ಇನ್ನು ಮಾಣಿ ಡ್ಯಾಂ ಪರಿಸರದಲ್ಲೂ ಕೂಡ ಮಳೆ ಪ್ರಮಾಣ ತಗ್ಗಿದೆ. ಗರಿಷ್ಠ 594.36 ಮೀಟರ್ ನೀರು ಸಂಗ್ರಹ ಸಮರ್ಥ್ಯ ಹೊಂದಿರುವ ಮಾಣಿ ಡ್ಯಾಂ ನಲ್ಲಿ ಈಗ 564.ಮೀಟರ್ ಡೆಡ್ ಸ್ಟೋರೇಜ್ ತಲುಪಿದ್ದು, ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ,
ಪ್ರತಿದಿನ 200 ಮಿಲಿಮೀಟರ್ ಮಳೆಯಾಗಬೇಕಿದ್ದ ಮಾಣಿ 16 ಮಿಲಿ ಮೀಟರ್ ಯಡಿಯೂರು 07 ಮಿಮಿ , ಹುಲಿಕಲ್ 15 ಮಿಮಿ ಮಾಸ್ತಿಕಚ್ಚೆಯಲ್ಲಿ 14 ಮಿಮಿ ಮಳೆಯಾಗಿದೆ. ಭದ್ರಾ ಡ್ಯಾಂ ನಲ್ಲೂ ಕೂಡ ನೀರಿನ ಪ್ರಮಾಣ ತಗ್ಗಿದೆ. ಗರಿಷ್ಠ 186 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಭದ್ರಾ ಡ್ಯಾಂ ನಲ್ಲ 137 ಅಡಿ ನೀರು ಸಂಗ್ರಹಗೊಂಡಿದ್ದು, 12.249 ಟಿಎಂಸಿ ನೀರು ಸಂಗ್ರಹಗೊಂಡಿದೆ. ಜಿಲ್ಲೆಯ ಕಿರಿದಾದ 2.14 ಟಿಎಂಸಿ ಸಾಮರ್ಥ್ಯದ ಗಾಜನೂರು ಡ್ಯಾಂ ನಲ್ಲೂ ಕೂಡ ನೀರಿನ ಸಮಸ್ಯೆ ಎದುರಾಗಿದೆ. ಜೂನ್ ತಿಂಗಳು ಕಳೆಯುತ್ತಾ ಬಂದರೂ, ಮಲೆನಾಡಿನಲ್ಲಿ ಮಳೆ ಬಾರದಿರುವುದು ಆತಂಕ ಮೂಡುವಂತೆ ಮಾಡಿದೆ.