ಗದಗ: ಸರಕಾರಿ ಹೈಸ್ಕೂಲ್’ಗೆ ಕಟ್ಟಡ ರೆಡಿಯಿದ್ರೂ ಉದ್ಘಾಟನೆ ಭಾಗ್ಯ ಸಿಗ್ತಿಲ್ಲ ಹೌದು ಗದಗ ಜಿಲ್ಲೆ ನಾಗಾವಿ ಗ್ರಾಮದಲ್ಲಿರುವ ಸರ್ಕಾರಿ ಹೈಸ್ಕೂಲ್ ಪರಿಸ್ಥಿತಿ ಈ ರೀತಿಯಾಗಿದೆ. ಹೈಸ್ಕೂಲ್’ಗಾಗಿ ಹೊಸ ಕಟ್ಟಡ ನಿರ್ಮಿಸಿದ್ರೂ ಪ್ರೈಮರಿ ಸ್ಕೂಲ್’ನಿಂದ ಶೀಫ್ಟ್ ಆಗದಿರುವ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಶಾಲೆ ನಿರ್ಮಾಣಕ್ಕೆ ಭೂಮಿದಾನ ಕೊಟ್ಟವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಊರಿನವರಿಗೆ ಅನುಕೂಲವಾಗ್ಲಿ ಅಂತಾ ಭೂದಾನ ಮಾಡಿದ್ವಿ ಆದ್ರೆ ಪ್ರಯೋಜನವಾಗ್ತಿಲ್ಲ ಅಂತಾ ಭೂದಾನಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಾವಿ ಗ್ರಾಮದ ಚಿಂಚಲಿ ಕುಟುಂಬಸ್ಥರಿಂದ ದಿವಂಗತ ಶ್ರೀ ವೀರುಪಾಕ್ಷಪ್ಪ ಚಿಂಚಲಿ ಹೆಸರಲ್ಲಿ ಶಾಲೆಗೆ ಭೂದಾನ ಮಾಡಲಾಗಿತ್ತು. ಈಗ ಅದೇ ಜಾಗದಲ್ಲಿ ಸುಸಜ್ಜಿತ ಕಟ್ಟಡ ರೆಡಿಯಿದೆ. ಆದ್ರೂ ಮಕ್ಕಳಿಗೆ ಅನುಕೂಲವಾಗ್ತಿಲ್ಲ ಅನ್ನೋದೆ ದೊಡ್ಡ ಸಮಸ್ಯೆಯಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ ಉದ್ಘಾಟನೆಗೆ ಸಚಿವರ ದಿನಾಂಕಕ್ಕಾಗಿ ಕಾಯ್ತಿದೀವಿ ಅಂತಾರೆ.
ಇನ್ನೂ ಸ್ಥಳೀಯವಾಗಿ ಸಮಸ್ಯೆ ಇದೆ ಅಂತಾರೆ. ಇದರಿಂದ ಬೇಸತ್ತಿದ್ದಾರೆ. ಹೈಸ್ಕೂಲ್ ಮಕ್ಕಳು ಪ್ರೈಮರಿ ಶಾಲೆ ಬಿಲ್ಡಿಂಗ್’ನಲ್ಲಿ ಕಲಿಯೋದ್ರಿಂದ ವಿದ್ಯಾರ್ಥಿಗಳಿಗೆ ಕಂಫರ್ಟ್ ಆಗೊಲ್ಲ ಅಂತಾರೆ ಪಾಲಕರು. ಶಿಕ್ಷಣ ಇಲಾಖೆ ಅಧಿಕಾರಿಗಳೇ ಕಟ್ಟಡ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್ ಆಗೋದು ಯಾವಾಗ? ಎಂದು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರಿಂದಲೂ ಶಾಲೆ ಶೀಫ್ಟ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.