ಬೆಂಗಳೂರು ;- ನಗರದ ಬಾರ್ ಒಂದರಲ್ಲಿ ವೈಷ್ಣವಿ ಬಿಲ್ಡರ್ಸ್ ಚೇರ್ಮನ್ ದರ್ಶನ್ ಮೇಲೆ ಉದ್ಯಮಿ ವೇದಾಂತ್ ದುಗಾರ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವೇದಾಂತ್ ದುಗರ್ ನೇಪಾಳದ ಕಠ್ಮಂಡುವಿನಿಂದ ಬೆಂಗಳೂರಿಗೆ ದುಗರ್ ಆಗಮಿಸುತ್ತಿದ್ದಂತೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಆರ್ಟಿ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ವೈಷ್ಣವಿ ಬಿಲ್ಡರ್ಸ್ ಚೇರ್ಮನ್ ದರ್ಶನ್ ಮೇಲೆ ಮೇ 9 ರಂದು ಉದ್ಯಮಿ ವೇದಾಂತ್ ದುಗಾರ್ ಹಲ್ಲೆ ನಡೆಸಿದ್ದ. ಈ ಕುರಿತು ಆರ್ಟಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ ವೇದಾಂತ್ ಮೇ 11ರಂದು ಬೆಂಗಳೂರಿನಿಂದ ವಿಮಾನದ ಮೂಲಕ ಬಾಂಬೆಗೆ ಹೋಗಿದ್ದ. ನಂತರ ಬಾಂಬೆಯಲ್ಲಿ ಕಂಪನಿ ಮೀಟಿಂಗ್ ಮುಗಿಸಿ ಅಲ್ಲಿಂದ ಖಾಸಗಿ ಜೆಟ್ ಮೂಲಕ ನೇಪಾಳಕ್ಕೆ ಏಸ್ಕೇಪ್ ಆಗಿದ್ದನು. ಆರೋಪಿಯನ್ನು ಹುಡುಕಿಕೊಂಡು ಮುಂಬೈಗೆ ಹೋಗಿದ್ದ ಆರ್ಟಿ ನಗರ ಪೊಲೀಸರು ವಾಪಸ್ ಆಗಿದ್ದರು. ಇದೀಗ ಏರ್ಪೋರ್ಟ್ ಸಿಬ್ಬಂದಿಯ ಮಾಹಿತಿ ಮೇರೆಗೆ ಆರೋಪಿ ಅಂದರ್ ಆಗಿದ್ದಾನೆ.