ಬೆಂಗಳೂರು: ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನಾಚರಣೆ ಕಾರ್ಯಕ್ರಮ ಅಂಗವಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಜ್ಯೋತಿ ಯಾತ್ರೆಗೆ ಕೆಂಪಾಂಬುಧಿ ಗಡಿ ಗೋಪುರದಿಂದ ಚಾಲನೆ ನೀಡಿದರು.
ಕೆಂಪೇಗೌಡನಗರದ ಕೆಂಪಾಂಬುಧಿ ಕೆರೆ, ಹಲಸೂರು, ಲಾಲ್ಬಾಗ್, ಮೇಖ್ರಿ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿಬಂದ ದಿವ್ಯ ಜ್ಯೋತಿಗಳು ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಸೇರಿದವು ಹಾಗೆ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ ಅವರ ಸಾರಥ್ಯದಲ್ಲಿ ಕೆಂಪಾಂಬುಧಿ ಕೆರೆ ಬಳಿಯ ಗೋಪುರದಿಂದ ಜ್ಯೋತಿಯನ್ನು ಹೊತ್ತು ತರಲಾಯಿತು.
ನಗರದ ನಾಲ್ಕು ದಿಕ್ಕಿನಲ್ಲಿರುವ ಗಡಿ ಗೋಪುರಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕೃತಗೊಳಿಸಲಾಗಿತ್ತು. ಈವರೆಗೆ ಬಿಬಿಎಂಪಿಯಿಂದಷ್ಟೇ ಕೆಂಪೇಗೌಡರ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಸರಕಾರದಿಂದ ಆಚರಣೆ ಮಾಡಲಾಯಿತು.
ಬಸವನಗುಡಿ ಶಾಸಕರಾದ ಶ್ರೀ.ರವಿ ಸುಬ್ರಮಣ್ಯ ಅವರು ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.