ಬೆಂಗಳೂರು ;- ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಡೆಂಟಲ್ ಡಾಕ್ಟರ್ ನ ಮಹಾ ಎಡವಟ್ಟು ಬಟಾ ಬಯಲಾಗಿದೆ.
ಹಲ್ಲು ನೋವು ಎಂದು ಕ್ಲಿನಿಕ್ ಹೋಗಿದ್ದ ವ್ಯಕ್ತಿಯ ಪ್ರಾಣಕ್ಕೆ ಈತ ಸಂಚಕಾರ ತಂದಿಟ್ಟು ಬಿಟ್ಟಿದ್ದಾನೆ.
ಸಣ್ಣ ನೋವಿಗೆ ವೈದ್ಯರ ಬಳಿ ಹೋದವನಿಗೆ ಹತ್ತಾರು ಕಡೆ ತಿರುಗುವಂತೆ ಡುಪ್ಲಿಕೇಟ್ ಡೆಂಟಲ್ ಡಾಕ್ಟರ್ ಮಾಡಿದ್ದು, ರೋಗಿಯ ಪರಿಸ್ಥಿತಿ ಹೇಳತ್ತೀರದ್ದಾಗಿದೆ.
ಹೌದು, ಅರುಣ್ ಕುಮಾರ್ ಹೆಸರಿನ ಡೆಂಟಲ್ ಕ್ಲಿನಿಕ್ ಡಾಕ್ಟರ್ ಈ ಎಡವಟ್ಟು ಎಸಗಿರುವ ಆರೋಪ ಕೇಳಿ ಬಂದಿದೆ. ವಿಜಯ ನಗರದ ಮೂಡಲಪಾಳ್ಯದಲ್ಲಿರುವ ಈ ಕ್ಲಿನಿಕ್ ಗೆ ಹಲ್ಲು ನೋವಿನ ಚಿಕಿತ್ಸೆ ಪಡೆಯಲು ನಾಗೇಂದ್ರ ಎಂಬ ವ್ಯಕ್ತಿ ಹೋಗಿದ್ದ. ಈ ವೇಳೆ ನಕಲಿ ವೈದ್ಯ ಹಲ್ಲು ತಗೆಯಲು ಸಜೆಸ್ಟ್ ಮಾಡಿದ್ದಾರೆ.
ಹಲ್ಲು ತಗೆಯದಾ ಹೊರತು ಹಲ್ಲಿನ ನೋವು ಸರಿ ಹೋಗೋದಿಲ್ಲ ಎಂದು ನಾಗೇಂದ್ರ ಗೆ ವೈದ್ಯರು ಸೂಚನೆ ನೀಡಿದ್ದಾರೆ.
ವೈದ್ಯರ ಸೂಚನೆ ಮೇರೆಗೆ ಹಲ್ಲು ನೋವಿಗೆ ಒಳಗಾಗಿದ್ದ ವ್ಯಕ್ತಿ ನಾಗೇಂದ್ರ ಹಲ್ಲು ತಗೆಯಲು ಒಪ್ಪಿಕೊಂಡಿದ್ದಾರೆ. ಕೇವಲ ಹತ್ತು ನಿಮಿಷದಲ್ಲಿ ಹಲ್ಲು ತಗೆಯುವುದಾಗಿ ಭರವಸೆ ನೀಡಿ ನೋವಿದ್ದ ಹಲ್ಲು ಕಿಳಲು ಬರೋಬ್ಬರಿ ೪೫ ನಿಮಿಷ ತಗೆದುಕೊಂಡಿದ್ದಾರೆ. ಹಲ್ಲು ತಗೆಯುತ್ತಿದ್ದಂತೆ ನಾಗೇಂದ್ರನ ಬಾಯಿಯಿಂದ ರಕ್ತಸ್ರಾವ ದೊಡ್ಡ ಮಟ್ಟದಲ್ಲಿ ಆಗಿದೆ. ಆರಂಭದಲ್ಲಿ ರಕ್ತಸ್ರಾವ ವಾಗುತ್ತೆ ಎಂದು ಕಾಟನ್ ತುರುಕಿ ಮನೆಗೆ ಕಳಿಸಿಕೊಟ್ಟಿದ್ದಾರೆ. ಮನೆಗೆ ಒಂದು ಗಂಟೆ ಆದರು ನಾಗೇಂದ್ರನಿಗೆ ರಕ್ತಸ್ರಾವ ಆಗೋದು ಕಡಿಮೆ ಆಗೋದಿಲ್ಲ. ರಕ್ತಸ್ರಾವ ನಿರಂತರವಾಗಿ ಆಗಿದ್ದರಿಂದ ನಾಗೇಂದ್ರ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.